ಉಡುಪಿ, ಅ 06 (DaijiworldNews/SM): ಇದೇ 13ರಂದು ದತ್ತಮಾಲಾ ಅಭಿಯಾನ ನಡೆಯುತ್ತಿದ್ದು, 5 ಸಾವಿರ ಜನ ಮಾಲಾಧಾರಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದತ್ತಯಾತ್ರೆ ಪ್ರಯುಕ್ತ ಶೋಭಯಾತ್ರೆ, ಧರ್ಮಸಭೆ ನಡೆಯುತ್ತದೆ. ಜಮ್ಮುಕಾಶ್ಮೀರದ ರಾಹುಲ್ ಕೌಲ್ ಭಾಗವಹಿಸುತ್ತಾರೆ. ದತ್ತಮಾಲಾ ಕಾರ್ಯಕ್ರಮದ ಸಲುವಾಗಿಯೇ ಬರುತ್ತಿದ್ದಾರೆ ಎಂದರು.
ಇನ್ನು 370ನೇ ವಿಧಿ ರದ್ದು ಮಾಡಿದಕ್ಕೆ ಪ್ರಧಾನಿ ಮೋದಿ ಹಾಗೂ ಕೇಂದ್ರಕ್ಕೆ ಅಭಿನಂದನೆ ಸಲ್ಲಿಸಲಿದರು. 1990ರ ಗಲಬೆಯಲ್ಲಿ ಓಡಿ ಬಂದವರು ಸ್ವತಃ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಇನ್ನು ಸೂಲಿಬೆಲೆಯನ್ನು ದೇಶದ್ರೋಹಿ ಅಂದದ್ದು ತಪ್ಪು. ಸಂಸದರ ಗೆಲುವಿನ ಹಿಂದೆ ಸೂಲಿಬೆಲೆ ಪರಿಶ್ರಮವಿದೆ. ಚಕ್ರವರ್ತಿ ಗೆ ನೆರೆ ಪರಿಹಾರ ವಿಚಾರದಲ್ಲಿ ನೋವಿದೆ. ದೇಶದ್ರೋಹಿ ಪಟ್ಟ ಕಟ್ಟಿದ್ದು ಮೂರ್ಖತನ ಎಂದಿದ್ದಾರೆ.