ಮಂಗಳೂರು ಜ 04: ಕಾಟಿಪಳ್ಳದಲ್ಲಿ ಹತ್ಯೆಯಾದ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ಶವ ರಸ್ತೆಯಲ್ಲೇ ಇಟ್ಟು ಪ್ರತಿಭಟನೆ ಮಾಡುತ್ತಿರುವ ಗ್ರಾಮಸ್ಥರು ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೀಪಕ್ ಶವಯಾತ್ರೆ ಮಾಡಲು ಖಡಕ್ ಆಗಿ ಅನುಮತಿ ನಿರಾಕರಿಸಿದ್ದ ಪೊಲೀಸರು ಇದೀಗ ಗ್ರಾಮದ ಒಳಗೆ ಮುಕ್ಕಾಲು ಕಿ. ಮೀ ಶವಯಾತ್ರೆ ಮಾಡಲು ಜಿಲ್ಲಾಡಳಿತ ಅವಕಾಶ ನೀಡಿದೆ. ಇನ್ನು ಈ ಶವಯಾತ್ರೆ ದೀಪಕ್ ಮನೆಯಿಂದ ರುದ್ರಭೂಮಿಯವರೆಗೆ ಮಾತ್ರ ಅನುಮತಿ ನೀಡಲಾಗಿದೆ.
ಜಿಲ್ಲಾಧಿಕಾರಿ ಸಸಿಕಾಂಥ್ ಸೆಂಥಿಲ್ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ . ಆರ್ ಸುರೇಶ್ ಕುಮಾರ್ ಅವರ ನೇತೃತ್ವದಲ್ಲಿ ಕುಟುಂಬಸ್ಥರ ಹಾಗೂ ಹಿಂದೂ ಸಂಘಟನೆಗಳ ಮುಖಂಡರುಗಳ ಮನವೊಲಿಸಲು ಯಶಸ್ವಿಯಾಗಿದ್ದಾರೆ. ಇದರೊಂದಿಗೆ ದೀಪಕ್ ಕುಟುಂಬಸ್ಥರಿಗೆ ಸಿಎಂ ನಿಧಿಯಿಂದ 5 ಲಕ್ಷ ಹಾಗೂ ಜಿಲ್ಲಾಡಳಿತದಿಂದ 5 ಲಕ್ಷ ಒಟ್ಟಾರೆಯಾಗಿ 10 ಲಕ್ಷ ಪರಿಹಾರ ಧನ ಘೋಷಣೆ ಮಾಡಲಾಗಿದೆ. ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಸಸಿಕಾಂಥ್ ಸೆಂಥಿಲ್ ಮಾತನಾಡಿ , ಒಬ್ಬ ಅಧಿಕಾರಿಯಾಗಿ ನಿಜಕ್ಕೂ ಕುಟುಂಬಸ್ಥರ ನೋವು ನನಗೆ ಅರ್ಥ ಆಗುತ್ತೆ. ವೈಯಕ್ತಿಕವಾಗಿ ಈ ಘಟನೆ ನನಗೆ ನೋವು ತಂದಿದೆ. ದಯವಿಟ್ಟು ಮುಂದಿನ ಅಂತ್ಯಸಂಸ್ಕಾರಕ್ಕೆ ಸಿದ್ದತೆ ನಡೆಸಬೇಕಾಗಿ ಮನವಿ ಮಾಡಿದರು.
ಆದರೆ 10 ಲಕ್ಷ ಪರಿಹಾರ ಧನವನ್ನು ತಿರಸ್ಕರಿಸಿದ ಪ್ರತಿಭಟನಾಕಾರರು 50 ಲಕ್ಷ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಮುಂದೆ ಪಟ್ಟು ಹಿಡಿದರು.

.jpeg)
.jpg)