ಮಂಗಳೂರು, ಅ 08 (Daijiworld News/MSP): ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಸತ್ತು ಹೋಗಿದೆ ಎಂದು ಮಾಜಿ ಸಚಿವ, ಜೆಡಿಎಸ್ ನ ಹಿರಿಯ ನಾಯಕ ಅಮರನಾಥ ಶೆಟ್ಟಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಅ. ೦೮ ರ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರ ನಿಷ್ಕ್ರೀಯವಾಗಿದ್ದು ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಎಲ್ಲಾ ಕಾಮರಿಗಳೂ ನೆನಗುದಿಗೆ ಬಿದ್ದಿದ್ದೂ, ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಹಾರಕ್ಕೆ ದೊಡ್ಡ ಮೊತ್ತದ ಪರಿಹಾರವನ್ನು ತರಲು ಬಿಜೆಪಿ ನಾಯಕರು ವಿಫಲರಾಗಿದ್ದಾರೆ. ಜನ ಕಂಗಾಲಾಗಿದ್ದಾರೆ. ಮಳೆ ನಿಂತರೂ ರಸ್ತೆಗಳ ಗುಂಡಿಗಳನ್ನು ಇನ್ನೂ ಮುಚ್ಚಿಲ್ಲ. ಜಿಲ್ಲೆಯು ಅಭಿವೃದ್ಧಿ ಕಾಣದೇ ಅಧಃಪತನಕ್ಕೆ ಹೋಗುತ್ತಿದೆ. ಇನ್ನಾದರೂ ಬಿಜೆಪಿ ನಾಯಕರು, ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ನಿಸ್ವಾರ್ಥ ಮನಸ್ಸಿನಿಂದ ದುಡಿಯಲಿ ಎಂದರು.
ಈ ಸಂದರ್ಭ ಜೆಡಿಎಸ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಕುಂಞಿ ಮತ್ತಿತರರರು ಉಪಸ್ಥಿತರಿದ್ದರು.