ಉಳ್ಳಾಲ, ಜ 4: ಟಾರ್ಗೆಟ್ ಗುಂಪಿನ ಸದಸ್ಯನೊಂದಿಗೆ ಸಚಿವ ಖಾದರ್ ಅವರು ಜೊತೆಗೆ ಕೂತು ಊಟ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಲ್ಯಾಸ್ ಉಳ್ಳಾಲ್ ಟಾರ್ಗೆಟ್ ಗ್ರೂಪ್ ಸದಸ್ಯ. ಈತ ಅನೇಕ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ನಟೋರಿಯಸ್ ಕ್ರಿಮಿನಲ್ ಚಟುವಟಿಕೆಗಳಲ್ಲಿ ಈತನ ವಿರುದ್ಧ ಆರೋಪವಿದೆ. ಕಾರ್ಯಕ್ರಮವೊಂದರಲ್ಲಿ ಸಚಿವ ಖಾದರ್ ಈತನ ಜೊತೆ ಕೂತು ಊಟ ಮಾಡುತ್ತಿದ್ದರು. ಈ ಫೋಟೋ ವೈರಲ್ ಆಗಿದ್ದು, ಖಾದರ್ ಅವರು ಟಾರ್ಗೆಟ್ ಗ್ರೂಪ್ ಜತೆ ನಂಟು ಬೆಳೆಸಿಕೊಂಡಿದ್ದಾರೆ ಅನ್ನುವ ಆರೋಪ ಕೇಳಿ ಬರುತ್ತಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಖಾದರ್, ಊಟ ಮಾಡುವ ಫೋಟೋ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಇಂತಹ ಆರೋಪಗಳಿಗೆ ನಾವೇನು ಮಾಡುವುದು. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಇಲ್ಯಾಸ್ ಸ್ಪರ್ಧಿಸಿದ್ದ. ಪಕ್ಕದಲ್ಲಿ ಬಂದು ಊಟಕ್ಕೆ ಕೂತರೆ ನಾನು ಏನು ಮಾಡುವುದು. ಕೊಲೆಗೆ ನಾನು ಬೆಂಬಲ ಕೊಡಲ್ಲ ಎಂದು ತಿಳಿಸಿದ್ದಾರೆ.