ನೆಲ್ಯಾಡಿ, ಅ 10 (DaijiworldNews/SM): ರಸ್ತೆ ಅಭಿವೃದ್ಧಿಯ ನೆಪದಲ್ಲಿ ರಸ್ತೆಯನ್ನು ಅಗೆದು ಹಾಕಿ ಹಾಳುಗೆಡವಿದ್ದು ಮಾತ್ರವಲ್ಲದೇ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿರುವುದನ್ನು ಪ್ರತಿಭಟಿಸಿ ಇಂದು ಪುತ್ತೂರಿನ ನೆಲ್ಯಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ರಾಷ್ಟ್ರೀಯ ಹೆದ್ದಾರಿ ೭೫ನ್ನು ಕೆಂದ್ರ ಸರಕಾರ ಚತುಷ್ಪಥ ರಸ್ತೆಯಾಗಿ ಮಂಜೂರುಗೊಳಿಸಿದ್ದು ಭೂ ಸ್ವಾಧೀನ ಪ್ರಕ್ರಿಯೆ ಮುಗಿದು ಎಲ್ & ಟಿ ಕಂಪನಿಯವರಿಗೆ ರಸ್ತೆ ನಿರ್ಮಾಣದ ಗುತ್ತಿಗೆಯನ್ನು ನೀಡಲಾಗಿದೆ. ಆದರೆ ಅವರು ಕಳೆದ ಮೂರು ವರ್ಷಗಳಿಂದ ರಸ್ತೆ ಬದಿಗಳಲ್ಲಿ ಯಾವುದೇ ತಾಂತ್ರಿಕ ರೂಪುರೇಷೆಗಳಿಲ್ಲದೆ ಅಗೆದು ಹಾಕಿ ರಸ್ತೆಯನ್ನು ಹಾಳು ಗೆಡವಿದ್ದಾರೆ.