ಪುತ್ತೂರು, ಅ.11(Daijiworld News/SS): ಜಮೀನಿನ ಖಾತೆ ಬದಲಾವಣೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಗ್ರಾಮಕರಣಿಕರೊಬ್ಬರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಕಡಬ ತಾಲೂಕಿನ ರಾಮಕುಂಜ ಮತ್ತು ಹಳೆನೇರಂಕಿ ಗ್ರಾಮದ ಗ್ರಾಮಕರಣಿಕ ದುರ್ಗಪ್ಪ (24) ಬಂಧನಕ್ಕೊಳಗಾದವರು ಎಂದು ತಿಳಿದುಬಂದಿದೆ.
ಕಡಬ ಗ್ರಾಮ ಪಂಚಾಯತ್ ಗ್ರಾಮ ಲೆಕ್ಕಾಧಿಕಾರಿ ದುರ್ಗಪ್ಪ ಎಂಬವರು ಖಾತಾ ಬದಲಾವಣೆ ವಿಚಾರದಲ್ಲಿ ಶರತ್ ಪಿ ಎನ್ ಹಲೇರನರಕ್ಕಿ ಎಂಬವರಿಂದ ರೂ.8000 ಬೇಡಿಕೆ ಇಟ್ಟಿದ್ದು ರೂ 5000 ಮುಂಗಡ ಹಣವನ್ನು ಪಡೆದಿದ್ದರು. ಬಳಿಕ ಪುನಃ ಬಾಕಿ ರೂ.3000 ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಆರೋಪಿಯನ್ನು ಬಂಧಿಸಿದ್ದಾರೆ.
ಈ ದಾಳಿಯಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮಸುಂದರ್, ಯೋಗೀಶ್, ಅಧಿಕಾರಿಗಳಾದ ಹರಿಪ್ರಸಾದ್, ರಾಧಕೃಷ್ಣ, ಉಮೇಶ್, ರಾಕೇಶ್, ರಾಜೇಶ್, ಪ್ರಶಾಂತ್, ವೈಶಾಲಿ, ಗಣೇಶ್ ಉಪಸ್ಥಿತರಿದ್ದರು.