ಉಡುಪಿ, ಅ 11 (Daijiworld News/MSP): ಎಐಸಿಸಿ ಕಾರ್ಯದರ್ಶಿ ಪಿ.ಸಿ.ವಿಷ್ಣುನಾಥನ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಮಂಜೇಶ್ವರದಲ್ಲಿ ನಡೆಯುವ ವಿಧಾನಸಭಾ ಉಪ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿವಂತೆ ನಿರ್ದೇಶನ ನೀಡಿದ್ದಾರೆ.
ಈ ವಿಚಾರವನ್ನು ತಮ್ಮ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿರುವ ಪ್ರಮೋದ್ ಮಧ್ವರಾಜ್, ಯುಡಿಎಫ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ನೆರವಾಗುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರು, ದೂರವಾಣಿ ಮೂಲಕ ಸಂಪರ್ಕಿಸಿ ಕೇರಳದ ಮಂಜೇಶ್ವರ ದಲ್ಲಿ ನಡೆಯುವ ವಿಧಾನ ಸಭಾ ಉಪ ಚುನಾವಣಾ ಪ್ರಯುಕ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ನೇತೃತ್ವದಲ್ಲಿ ನಾಳೆ ನಡೆಯುವ ಚುನಾವಣಾ ತಯಾರಿ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಆದೇಶ ನೀಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು . ಇದಕ್ಕೆ ಸಂಬಂಧಿಸಿದ ಅಧಿಕೃತ ಆದೇಶದ ಪ್ರತಿಯು ಒಂದೆರಡು ದಿನಗಳಲ್ಲಿ ಕೈ ಸೇರಲಿದೆ ಹಾಗೂ ವಿಶೇಷವಾಗಿ ಪ್ರಮೋದ್ ಮಧ್ವರಾಜ್ ತನ್ನನ್ನು ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಳ್ಳಲು ಇದ್ದ ಅಡಚಣೆಗಳೆಲ್ಲ ನಿವಾರಣೆಯಾಗಿದೆ, ಎಂಬ ಮಾತು ಕೇಳಿಬರುತ್ತಿತ್ತು.
ಈ ಬಗ್ಗೆ ದಾಯ್ಜಿವರ್ಲ್ಡ್ ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವರು, ವೇಣುಗೋಪಾಲ್ ಮತ್ತು ದಿನೇಶ್ ಗುಂಡುರಾವ್ ಫೋನ್ ಮೂಲಕ ನನ್ನನ್ನು ಇಂದು ಸಂಪರ್ಕಿಸಿದ್ದು , ಚುನಾವಣಾ ಅಭ್ಯರ್ಥಿಯ ಬೆಂಬಲವಾಗಿ ನಿಂತು ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದ್ದಾರೆ. ನಾನು ಇದಕ್ಕೆ ಸಮ್ಮತಿ ನೀಡಿದ್ದೇನೆ. ಈ ಹಿನ್ನಲೆಯಲ್ಲಿ ನಾಳೆ ಶನಿವಾರ ಕಿರಿಮಂಜೇಶ್ವರಕ್ಕೆ ತೆರಳಲಿದ್ದೇನೆ ಎಂದರು.
ಈ ಬಗ್ಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಚರ್ಚೆಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ 'ಅದರ ಬಗ್ಗೆ ಗೊತ್ತಿಲ್ಲ, ನಾನು ಅದನ್ನು ಪರಿಗಣನೆ ತೆಗೆದುಕೊಳ್ಳುವುದಿಲ್ಲ ಎಂದು ನೇರವಾಗಿ ಉತ್ತರಿಸಿದರು'.
ಕೆಪಿಸಿಸಿಯಿಂದ ಕರೆ ಬಂದಿದ್ದರೆ ಪ್ರಮೋದ್ ಮಧ್ವರಾಜ್ ಅವರದ್ದು ಕಾಂಗ್ರೆಸ್ ಪಕ್ಷದಲ್ಲಿರುವ ಸ್ಥಾನವೇನು ? ಅಥವಾ ಅವರು ಮತ್ತೆ ಕಾಂಗ್ರೆಸ್ ಗೆ ಪ್ರಾಥಮಿಕ ಸದಸ್ಯತನ ಕ್ಕೆ ಅರ್ಜಿ ಸಲ್ಲಿಸಿದ್ದಾರೆಯೇ ? ಎಲ್ಲಾ ಪಕ್ಷದೊಳಗಿನ ಸಂಧಾನಗಳು ಬೆಂಗಳೂರಿನಲ್ಲಿಯೇ ನಡೆದು ಹೋಗಿವೆಯೇ ಎಂಬುವುದು ಈಗ ಸಾರ್ವಜನಿಕರಲ್ಲಿ ಕುತೂಹಲ ಕೆರಳಿಸಿರುವ ಪ್ರಶ್ನೆ.
ಜೇಶ್ವರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯು ಅಕ್ಟೋಬರ್ 21ರಂದು ಸೋಮವಾರ ನಡೆಯಲಿದ್ದು, ಯುಡಿಎಫ್ ಅಭ್ಯರ್ಥಿಯಾಗಿ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಎಂ.ಸಿ. ಖಮರುದ್ದೀನ್ ಅವರು ಕಣಕ್ಕಿಳಿದಿದ್ದಾರೆ.