ಮಂಗಳೂರು, ಅ 15 (Daijiworld News/MSP): ಇಂದಿನಿಂದ ಮುಂದಿನ ಎರಡು ದಿನಗಳ ಕಾಲ ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯ ಜೊತೆಗೆ ಯೊಲ್ಲೋ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ನೀಡಿದೆ.
ಕರಾವಳಿಯಲ್ಲಿ ಅಲ್ಲಲ್ಲಿ ಸೋಮವಾರ ಸಂಜೆಯ ಬಳಿಕವೂ ಗುಡುಗು ಸಹಿತ ಉತ್ತಮ ಮಳೆಯಾಗಿತ್ತು. ದಕ್ಷಿಣ ಕನ್ನಡ, ಜಿಲ್ಲೆಯ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ,ಬಂಟ್ವಾಳ, ಮೂಲ್ಕಿ, ಮಂಗಳೂರು ನಗರ, ಉಳ್ಳಾಲ ಸೋಮವಾರ ಸಂಜೆ ಗುಡುಗು ಸಹಿತ ಮಳೆ ಸುರಿದಿದೆ. ಗುಡುಗು ಸಹಿತ ಮಳೆಯ ಪರಿಣಾಮ ಉಜಿರೆ ಕಲ್ಮಂಜ ಬಳಿಯ ದಾಮೋದರ ಅವರ ಮನೆ ಹಾನಿಗೊಳಗಾಗಿದೆ.
ಕರ್ನಾಟಕ ಕರಾವಳಿಯೊಂದಿಗೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಪ್ರದೇಶಗಳಲ್ಲಿಯೂ ಮಂಗಳವಾರ ಇಡೀ ದಿನ ಮಳೆಯಾಗಲಿದೆ. ಛತ್ತೀಸ್ಗಢ, ಒಡಿಶಾ, ಮೇಘಾಲಯ, ನಾಗಾಲ್ಯಾಂಡ್, ಅಸ್ಸಾಂ, ಮಣಿಪುರ ಮತ್ತು ಮಿಜೋರಾಂನ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಸಂಸ್ಥೆ ತಿಳಿಸಿದೆ.