ಉಡುಪಿ, ಅ 15 (Daijiworld News/MSP): ಮಲ್ಪೆ ತೀರದಿಂದ ಮೀನುಗಾರಿಕೆಗೆ ತೆರಳಿದ ಆಳಸಮುದ್ರ ಬೋಟುಗಳಿಂದ ಮಹಾರಾಷ್ಟ್ರದ ರತ್ನಗಿರಿ, ಮಾಲ್ವಣ್ ಪ್ರದೇಶದಲ್ಲಿ ಮೀನು ಲೂಟಿ ಮಾಡಿರುವ ಪ್ರಕರಣ ಎರಡು ದಿನಗಳ ಬಳಿಕ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಮಲ್ಪೆಯ ಮೀನುಗಾರರು ಅಲ್ಲಿನ ತೀರಾ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ ಅಲ್ಲಿನ ಮೀನುಗಾರರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಈ ಹಿಂದೆ ತೀರದ ನಲ್ವತ್ತು ಕಿ.ಮೀ ಒಳಗೆ ಬಂದು ಮೀನುಗಾರಿಕೆ ನಡೆಸುತ್ತಿದೆ ಎಂದು ಮಹಾರಾಷ್ಟ್ರದ ಮೀನುಗಾರರು ಬೋಟುಗಳ ಅಟ್ಟಿಸುತ್ತಿದ್ದರು. ಈಗ ತೀರದ ನಲ್ವತ್ತು ಕಿ.ಮೀಗಳಿಂದ ಈಚೆಗೆ ಮೀನುಗಾರಿಕೆ ನಡೆಸುತ್ತಿದ್ದ ಬೀಟುಗಳನ್ನು ಕೂಡಾ ಲೂಟಿ ಮಾಡಲು ಮುಂದಾಗಿದ್ದಾರೆ. ವಾರದ ಹಿಂದೆ ಎರಡು ಬೋಟುಗಳನ್ನು ಹಿಡಿದು ಮೀನಿನ ಜತೆ ಬೋಟಿನ ಸಲಕರಣೆಗಳನ್ನು ದರೋಡೆ ಮಾಡಿದ್ದಾರೆ ಎನ್ನಲಾಗಿದೆ.