ಬೈಂದೂರು, ಅ 17 (Daijiworld News/MSP): ಅರ್ಧ ವಾರ್ಷಿಕ ರಜೆಯ ಮಜಾದಲ್ಲಿದ್ದ ನಾಲ್ವರು ಮಕ್ಕಳು ಈಜಲು ತೆರಳಿದ ಸಂದರ್ಭದಲ್ಲಿ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೈಂದೂರು ಕಂಬದಕೋಣೆ ಬಳಿ ಅ. 17 ರ ಗುರುವಾರ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿಗಳು ವಂಶಿತ್ ಶೆಟ್ಟಿ (12) ಮತ್ತು ರಿತೇಶ್ ಶೆಟ್ಟಿ ( 12) ಎಂದು ಗುರುತಿಸಲಾಗಿದೆ. ಇವರಿಬ್ಬರು ಸಂದೀಪನ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಏಳನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ.
ಸಂದೀಪನ್ ಶಾಲೆಯ ಎಸ್ ಎಸ್ ಎಸ್ ಸಿ ವಿದ್ಯಾರ್ಥಿಗಳಾದ ಪ್ರದ್ವಿತ್ ಶೆಟ್ಟಿ ಮತ್ತು ವಿಜಯೇಂದ್ರ ಶೆಟ್ಟಿ ಜೊತೆ ಈಜಲೆಂದು ವಂಶಿತ್ ಹಾಗೂ ರಿತೇಶ್ ಹೋದಾಗ ಈ ಘಟನೆ ನಡೆದಿದೆ. ಪ್ರದ್ವಿತ್ ಶೆಟ್ಟಿ ಮತ್ತು ವಿಜಯೇಂದ್ರ ಶೆಟ್ಟಿ ಈಜಲು ಬರುವ ಹಿನ್ನಲೆಯಲ್ಲಿ ಇವರಿಬ್ಬರು ಬಚಾವ್ ಆಗಿದ್ದಾರೆ.
ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಗಳ ಮೃತದೇಹಕ್ಕೆ ನಡೆಯುತ್ತಿರುವ ಶೋಧ ಕಾರ್ಯ ಮುಂದುವರಿಸಲಾಗಿದೆ