ಬೈಂದೂರು, ಅ 19 (Daijiworld News/MSP): ಕಂಬದಕೋಣೆ ಸಮೀಪದ ಹಳಗೇರಿಯಲ್ಲಿ ಎಡಮಾವಿನ ಹೊಳೆ ಬೊಬ್ಬರ್ಯಗುಂಡಿ ಎಂಬಲ್ಲಿ ಗುರುವಾರ ನೀರುಪಾಲಾಗಿದ್ದ ಬಾಲಕನ ರಿತೇಶ್ ಮೃತದೇಹ ಅ. 19 ರ ಶನಿವಾರ ಬೆಳಗ್ಗೆ ಪತ್ತೆಯಾಗಿದೆ. ಅರ್ಧವಾರ್ಷಿಕ ರಜೆಯ ಮೋಜಿನಲ್ಲಿದ್ದ ನಾಲ್ವರು ಬಾಲಕರು ಬೊಬ್ಬರ್ಯಗುಂಡಿ ಎಂಬಲ್ಲಿಗೆ ಈಜಲು ತೆರಳಿದ್ದರು. ಈ ಪೈಕಿ ವಂಶಿತ್ ಶೆಟ್ಟಿ (12) ಮತ್ತು ರಿತೇಶ್ ಶೆಟ್ಟಿ ( 12) ನೀರುಪಾಲಾಗಿದ್ದರು.
ಈ ಪೈಕಿ ಅಕ್ಟೋಬರ್ 17 ರ ಘಟನೆ ನಡೆದ ದಿನದಂದೇ, ವಂಶಿತ್ ಶವ ಪತ್ತೆಯಾಗಿತ್ತು. ಆದರೆ ರಿತೇಶ್ ಶವ ಪತ್ತೆಯಾಗಿರಲಿಲ್ಲ. ಬಾಲಕನಿಗಾಗಿ ಕಳೆದೆರಡು ದಿನಗಳಿಂದ ಹುಡುಕಾಟ ಮುಂದುವರಿದಿತ್ತು. ಸುರತ್ಕಲ್ ಮುಳುಗು ತಜ್ಞರ ತಂಡದಿಂದ ಕಾರ್ಯಾಚರಣೆ ನಡೆಸಿದ್ದರು. ಸ್ಥಳದಲ್ಲಿಯೇ ಪೊಲೀಸ್ ಅಧಿಕಾರಿಗಳು ಮೊಕ್ಕಂ ಹೂಡಿದ್ದರು.
ಬಾಲಕರು ಮುಳುಗಿದ್ದ ಸುಮಾರು ಒಂದು ಕಿಮೀ ಮುಂದೆ ರಿತೇಶ್ ಶವ ಪತ್ತೆಯಾಗಿದೆ. ಬಾಲಕರಿಬ್ಬರು ಸಂದೀಪನ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಏಳನೇ ತರಗತಿ ವಿದ್ಯಾರ್ಥಿಗಳಾಗಿದ್ದರು.