ಉಡುಪಿ, ಅ 19 (DaijiworldNews/SM): ಇಲ್ಲಿನ ಅಲೆವೂರು ಕರ್ವಾಲಿನ ಡಂಪಿಂಗ್ ಯಾರ್ಡ್ ಗೆ ಉಡುಪಿ ಶಾಸಕ ಕೆ. ರಘುಪತಿ ಭಟ್ ಭೇಟಿ ನೀಡಿದರು.
ಶಾಸಕರೊಂದಿಗೆ ಉಡುಪಿ ನಗರಸಭೆ ಅಧಿಕಾರಿಗಳು ಭೇಟಿಯ ವೇಳೆ ಜೊತೆಗಿದ್ದರು. ಈ ಸಂದರ್ಭ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಡಂಪಿಂಗ್ ಯಾರ್ಡ್ ನ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಶಾಸಕ ರಘುಪತಿ ಭಟ್, ಸಮಸ್ಯೆಗಳನ್ನು ಪರಿಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಶಾಸಕರ ಜೊತೆಗೆ ನಗರ ಸಭೆಯ ಪೌರಾಯುಕ್ತರಾದ ಆನಂದ್ ಸಿ.ಕಲ್ಲೋಳಿಕರ್, ನಗರಸಭೆ ಇಂಜಿನಿಯರ್ ಗಣೇಶ್, ಪರಿಸರ ಅಧಿಕಾರಿಗಳು, ಇನ್ನೀತರ ಸಂಬಂದಪಟ್ಟ ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.