ಮಂಗಳೂರು, ಸೆ15: ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಕದ್ರಿ ಮೈದಾನದಲ್ಲಿ ಕದ್ರಿ ಕ್ರಿಕೆಟರ್ಸ್ ಅಸೋಸಿಯೇಶನ್ ವತಿಯಿಂದ ರಿದಮಿಕ್ ನೈಟ್ - 2017 ಸಂಗೀತಾ ರಸಮಂಜರಿ ಕಾರ್ಯಕ್ರಮ ಗುರುವಾರ ರಾತ್ರಿ ನಡೆಯಿತು.
ಹ್ಯಾಟ್ರಿಕ್ ಹೀರೊ ಡಾ. ಶಿವರಾಜ್ ಕುಮಾರ್ ಮತ್ತು ಡಿಂಪಲ್ ಕ್ವೀನ್ ರಚಿತ ರಾಮ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದು, ರಿದಮಿಕ್ ನೈಟ್ 2017 ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು. ಉಳಿದಂತೆ ಖ್ಯಾತ ಸಂಗೀತಗಾರರು ಹಾಗೂ ಹಿನ್ನೆಲೆ ಸಂಗೀತಗಾರರು ಪಾಲ್ಗೊಂಡು ಅದ್ಭುತ ಪ್ರದರ್ಶನ ನೀಡಿದರು.
ಕರಾವಳಿಯ ಬಗ್ಗೆ ತುಂಬು ಪ್ರೀತಿಯಿಂದ ಮಾತನಾಡಿದ ಡಾ. ಶಿವರಾಜ್ ಕುಮಾರ್, ಮಾತಿನ ಉದ್ದಕ್ಕೂ ಕರಾವಳಿ ಕಡಲಕಿನಾರೆಯ ವಾತವರಣ, ಇಲ್ಲಿನ ತಿನಿಸು, ಜನರ ಪ್ರೀತಿಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ರಿದಮಿಕ್ ನೈಟ್ – 2017 ಕಾರ್ಯಕ್ರಮವನ್ನು ಸಂಯೋಜಿಸಿದ್ದ ಕದ್ರಿ ಕ್ರಿಕೆಟರ್ಸ್ ಕ್ಲಬ್ ಗೆ ಅಭಿನಂದಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸುಪ್ರೀಯಾ ಲೋಹಿತ್, ಅಜಯ್ ವೇರಿಯರ್, ದೀಪಕ್ ದುಡೇರ, ಪ್ರಕಾಶ್ ಮಹಾದೇವನ್ ಸೇರಿದಂತೆ ಅನೇಕ ಹಿನ್ನೆಲೆ ಸಂಗೀತಗಾರರು ವೇದಿಕೆಯಲ್ಲಿ ಸಂಗೀತದ ಮಳೆಯನ್ನೇ ಹರಿಸಿ, ಕಲಾಭಿಮಾನಿಗಳ ಮನಸೂರೆಗೊಳಿಸಿದರು.
ಸಚಿವ ರಮನಾಥ್ ರೈ, ಯು ಟಿ ಖಾದರ್, ಮೇಯರ್ ಕವಿತ ಸನಿಲ್, ಎಮ್ ಎಲ್ ಎ ಮೊಯೀದ್ದಿನ್ ಭಾವ, ಜೆ ಆರ್ ಲೋಬೋ ಸೇರಿದಂತೆ ಗಣ್ಯಾಥಿ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.. ಸಾವಿರಾರು ಸಂಖ್ಯೆಯ ಜನಸ್ತೋಮದ ನಡುವೆ ರಿದಮಿಕ್ ನೈಟ್ - 2017 ಸಂಗೀತಾ ರಸಮಂಜರಿ ಕಾರ್ಯಕ್ರಮ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಯಿತು.