ಬೆಂಗಳೂರು ಜ 07 : ಬೆಂಗಳೂರಿನ ಸೋಮಸಂದ್ರಪಾಳ್ಯ ಮ್ಯಾನ್ಹೋಲ್ಗೆ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟ ಘಟನೆ ಜ 07 ರ ಭಾನುವಾರ ಸಂಭವಿಸಿದೆ. ಸೋಮಸಂದ್ರಪಾಳ್ಯದ ಎನ್ ಡಿ ಸೆಫಲ್ ಅಪಾರ್ಟ್ ಮೆಂಟ್ ಬಳಿಯ ಒಳಚರಂಡಿ ನೀರು ಸಂಸ್ಕರಣಾ ಘಟಕ(ಎಸ್ ಟಿಪಿ)ಕ್ಕೆ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಘಟನೆ ನಡೆದ ತಕ್ಷಣ ಅಲ್ಲಿಗೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಅಕ್ಸಿಜನ್ ಸಿಲಿಂಡರ್ ಸಹಾಯದೊಂದಿಗೆ ಮ್ಯಾನ್ ಹೋಲ್ ಗೆ ಇಳಿದಿದ್ದು ಹರಸಾಹಸಪಟ್ಟು ಮೂವರ ಕಾರ್ಮಿಕರನ್ನು ಮೇಲಕ್ಕೆ ಎತ್ತಿದರು. ನಂತರ ಅವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಯಿತು. ಮೂವರನ್ನು ಕಾರ್ಮಿಕರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಸ್ಥಳಕ್ಕೆ ಮೇಯರ್ ಆರ್. ಸಂಪತ್ ರಾಜ್, ಬೆಂಗಳೂರು ಅಭಿವೃದ್ದಿ ಸಚಿವ ಕೆ.ಜೆ ಜಾರ್ಜ್ ಮುಂತಾದವರು ಭೇಟಿ ನೀಡಿದ್ದಾರೆ. ಮೃತರನ್ನು ಮಾದೇಗೌಡ, ನಾರಾಯಣಸ್ವಾಮಿ ಎಂದು ಗುರುತಿಸಲಾಗಿದೆ.
ಯಾವುದೇ ಭದ್ರತಾ ಕ್ರಮಗಳನ್ನು ಕೈಗೊಳ್ಳದೇ ಕಾರ್ಮಿಕರನ್ನು ಮ್ಯಾನ್ ಹೋಲ್ ಒಳಗೆ ಇಳಿದಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ. ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಂದರ್ಭಿಕ ಚಿತ್ರ