ಉಡುಪಿ, ಅ 24 (Daijiworld News/MSP): ಈ ಹಿಂದೆ ಎಲ್ಲರ ಮನೆ ಅಂಗಳದಲ್ಲಿ ಶೋಭಿಸುವ ರಂಗೋಲಿ ಕಲೆ ಅಧುನೀಕರಣದಿಂದ ಇಂದು ಕಣ್ಮರೆಯಾಗುತ್ತಿದೆ. ಇದ್ದರೂ ಅದರ ಸಂಖ್ಯೆ ಬಹಳ ಕಡಿಮೆ. ನಮ್ಮ ಸಂಸ್ಕೃತಿಯ ಪ್ರಮುಖ ಭಾಗಗಳಲ್ಲೊಂದಾಗಿರುವ, ರಂಗೋಲಿ ಕಲೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಹಾಗೂ ದೀಪಾವಳಿ ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡಲು ನಿಮ್ಮ ನೆಚ್ಚಿನ ದಾಯ್ಜಿವಲ್ಡ್ ವಾಹಿನಿ "ರಂಗೋಲಿ ಸ್ಪರ್ಧೆ" ಏರ್ಪಡಿಸಿದೆ. ಈ ಸ್ಪರ್ಧೆಯಲ್ಲಿ ಮುಕ್ತ ಅವಕಾಶವಿದ್ದು ಎಲ್ಲರಿಗೂ ಭಾಗವಹಿಸಬಹುದಾಗಿದೆ. ಈ ಸುವರ್ಣಾವಕಾಶದ ನೋಂದಣಿಗೆ ಇಂದೇ (ಅ.24) ಕೊನೆಯ ದಿನಾಂಕ.
"ರಂಗೋಲಿ ಸ್ಪರ್ಧೆ"ಯು ಎರಡು ವಿಭಾಗಗಳಲ್ಲಿ ನಡೆಯಲಿದೆ. ಮೊದಲ ವಿಭಾಗದಲ್ಲಿ 20 ವರ್ಷ ಒಳಗಿನವರಿಗೆ ಹಾಗೂ ಎರಡನೇ ವಿಭಾಗದಲ್ಲಿ ೨೦ ವರ್ಷ ಮೇಲ್ಪಟ್ಟವರಿಗೆ. ಮೊದಲ ವಿಭಾಗದಲ್ಲಿ ಕೇವಲ ಹೂವುಗಳನ್ನು ಬಳಸಿ ರಂಗೋಲಿ ಬಿಡಿಸಬೇಕು.ಎರಡನೇ ವಿಭಾಗದಲ್ಲಿ ಕೇವಲ ಪುಡಿಯನ್ನು ಬಳಸಿ ರಂಗೋಲಿ ಬಿಡಿಸಬೇಕು.
ಸ್ಪರ್ಧೆಯ ನಿಯಮಗಳು ಈ ಕೆಳಗಿನಂತಿವೆ:
1.ರಂಗೋಲಿಯ ಗಾತ್ರ 4*4 ಫೀಟ್ ಮೀರಿರಬಾರದು.
2.ಸ್ಪರ್ಧಿಗಳಿಗೆ ಗರಿಷ್ಟ 2 ಗಂಟೆ ಕಾಲಾವಕಾಶ ಇದೆ.
3.ರಂಗೋಲಿ ಬಿಡಿಸಲು ಅಗತ್ಯವಿರುವ ವಸ್ತುಗಳನ್ನು ಸ್ಪರ್ಧಿಗಳೇ ತರಬೇಕು.
4.ಸ್ಪರ್ಧಿಗಳ ಕ್ರಯಾಶೀಲತೆಗೆ ಹೆಚ್ಚಿನ ಆದ್ಯತೆ.
ಸ್ಪರ್ಧೆಯು ಇದೇ ಶನಿವಾರ ಮಧ್ಯಾಹ್ನ 2.30 ಕ್ಕೆ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಕನ್ನರ್ಪಾಡಿಯಲ್ಲಿ ನಡೆಯಲಿದ್ದು,ಸ್ಪರ್ಧಾಳುಗಳು 30 ನಿಮಿಷಗಳ ಮುಂಚಿತವಾಗಿ ಹಾಜರಿರತಕ್ಕದ್ದು.ರಂಗೋಲಿ ಬಿಡಿಸಲು ಅವಶ್ಯಕವಾದ ಸ್ಥಳಗಳನ್ನು ಒದಗಿಸಲಾಗುವುದು.ಸ್ಪರ್ಧಿಗಳು ಬರುವಾಗ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರತಕ್ಕದ್ದು.
ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಂದವರಿಗೆ ಬಹುಮಾನ ನಗದು,ಫಲಕ ಹಾಗೂ ಪ್ರಮಾಣಪತ್ರಗಳನ್ನು ಕೊಡಲಾಗುವುದು. ಭಾಗವಹಿಸಿದ ಸ್ಪರ್ಧಿಗಳೆಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.
For registration contact
73386 37688 / 90