ಉಡುಪಿ, ಅ 24 (DaijiworldNews/SM): ಇಂದಿನ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅರಿವು ಕಡಿಮೆ ಇದೆ. ಇತಿಹಾಸವನ್ನು ತಿರುಚಲಾಗುತ್ತಿದೆ. ಇದರ ಬಗ್ಗೆ ಹೆಚ್ಚು ಹೆಚ್ಚು ಶಿಕ್ಷಣದ ಮೂಲಕ ಕಲಿಸಬೇಕು ಇದಕ್ಕಾಗಿ ಹೆಚ್ಚು ಸ್ಪರ್ಧೆಗಳನ್ನು ಆಯೋಜಿಸಬೇಕು. ಮುಂದೆ ಶಾಲಾ ಕಾಲೇಜುಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಸ್ವಾತಂತ್ರ್ಯಹೋರಾಟಗಾರರ ಬಗ್ಗೆ ತಿಳಿಸುವ ಕೆಲಸ ಆಗಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಅವರು, ಸ್ವಾತಂತ್ರ್ಯೋತ್ಸವದ ಕಾಲದಲ್ಲಿ ಎರಡು ರೀತಿಯ ಹೋರಾಟಗಳು ನಡೆದಿತ್ತು. ಕ್ರಾಂತಿಕಾರಿ ಮತ್ತು ಅಹಿಂಸಾತ್ಮಕ ರೀತಿಯಲ್ಲಿ ಹೋರಾಟಗಳು ನಡೆದಿದ್ದವು. ಸುಭಾಶ್ಚಂದ್ರ ಬೋಸ್ ಅವರ ಕಾಲದಲ್ಲಿ ಅವರದ್ದೇ ನೇತೃತ್ವದಲ್ಲಿ ಜೈ ಹಿಂದ್ ಮೂಲಕ ಹೋರಾಟ ಮಾಡಿದ್ದರು. ಈ ಮೂರು ಹೋರಾಟಗಳ ಕಾರಣಕ್ಕಾಗಿ ದೇಶಕ್ಕೆ ಹೋರಾಟದ ಅರಿವು ಬಂತು.
ಆದರೆ, ಸಿದ್ದರಾಮಯ್ಯ ಅವರಿಗೆ ಕೇವಲ ರಾಜಕೀಯ, ಓಟ್, ಜಾತಿ, ಧರ್ಮ ಮಾತ್ರ ಕಾಣಿಸುತ್ತದೆ. ವೀರ ಸಾವರ್ಕರ್ ಈ ದೇಶಕ್ಕಾಗಿ ಹೋರಾಡಿದ್ದಾರೆ. ಅವರಿಗೆ ಗೌರವ ಸಲ್ಲಬೇಕು. ಇತಿಹಾಸವನ್ನು ತಿಳಿದು ಕೊಳ್ಳದ ಸಿದ್ದರಾಮಯ್ಯಗೆ ಇದು ಅರ್ಥ ಆಗಲ್ಲ. ಇವರ ಸರ್ಟಿಫಿಕೇಟ್ ಮಹಾತ್ಮ ಗಾಂಧಿ ಅಥವಾ ಸಾವರ್ಕರ್ ಗೆ ಅಗತ್ಯವಿಲ್ಲ ಎಂದು ಕಿಡಿ ಖಾರಿದ್ದಾರೆ.