ಮಂಗಳೂರು ಜ 07 : ಜ 7 ರ ಭಾನುವಾರ ವಿವಿಧ ಕಾರ್ಯಕ್ರಮಗಳ ನಿಮಿತ್ತ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದು ಸಂಜೆ ನಗರಕ್ಕೆ ಆಗಮಿಸಿ ಕದ್ರಿ ಪಾರ್ಕ್ ನಲ್ಲಿರುವ ಪುಟಾಣಿ ರೈಲು, ಹಾಗೂ ಸಂಗೀತ ಕಾರಂಜಿಗೆ ಚಾಲನೆ ನೀಡಲಿರುವರು. ಕಾರ್ಯಕ್ರಮದ ಬಳಿಕ ಸರ್ಕೀಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ , ಇದಕ್ಕಾಗಿ ಸರ್ಕೀಟ್ ಹೌಸ್ ನ ಹೊಸ ಕಟ್ಟಡವನ್ನು ಸಜ್ಜುಗೊಳಿಸಲಾಗಿದೆ. ಬಳಿಕ ಜ 8 ರಂದು ಉಡುಪಿಗೆ ತೆರಳಿ ಜಿಲ್ಲೆಯ ವಿವಿದೆಡೆ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳುವರು.
ಇನ್ನು ಮುಖ್ಯಮಂತ್ರಿಯಾದ ಬಳಿಕ ಸಿದ್ದರಾಮಯ್ಯ ಪ್ರಥಮ ಬಾರಿಗೆ ಮಂಗಳೂರಿನಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಮುಖ್ಯಮಂತ್ರಿಗಳ ರಾತ್ರಿಯ ಬೋಜನಕ್ಕೆ ಖ್ಯಾದಗಳ ಪಟ್ಟಿಯಲ್ಲಿ ಅಪ್ಪೆಮಿಡಿ ಉಪ್ಪಿನಕಾಯಿ, ತೊಂಡೆ ಗೇರುಬೀಜ ಪಲ್ಯ, ನೀರುದೋಸೆ, ನಾಟಿಕೋಳಿ ಗಸಿ, ಎಟ್ಟಿ ಗಸಿ, ಕುಚಲಕ್ಕಿ ಅನ್ನ ಹೀಗೆ ಅಪ್ಪಟ್ಟ ಮಂಗಳೂರು ಶೈಲಿಯ ಆಹಾರ ಸಿದ್ದ ಪಡಿಸಲಾಗುತ್ತಿದೆ.