ಸೆ15: ಎತ್ತಿನಹೊಳೆ ಯೋಜನೆ ವಿಚಾರಕ್ಕೆ ಸಂಬಂಧಪಟ್ಟಂತೆ ಹಸಿರುಪೀಠದಲ್ಲಿ ನಡೆಯಬೇಕಿದ್ದ ವಿಚಾರಣೆಗೆ ರಾಜ್ಯ ಸರ್ಕಾರದ ವಕೀಲರು ಗೈರು ಹಾಜರಾಗಿದ್ದಾರೆ. ರಾಜ್ಯ ಸರ್ಕಾರ ಪರ ವಕೀಲರಾದ ಅಶೋಕ್ ದೇವರಾಜ್, ನೀರಾವರಿ ನಿಗಮದ ವಕೀಲರಾದ ನವೀನ್ ಆರ್, ಗುರುವಾರ ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ಇನ್ನು ಇವರಿಬ್ಬರಿಗಾಗಿ ಹಸಿರು ನ್ಯಾಯ ಪೀಠದ ನ್ಯಾಯವಾದಿಗಳಾದ ಜಾವೇದ್ ರಹೀಮ್, ರಂಜನ್ ಚಟರ್ಜಿ ೧೦ ನಿಮಿಷ ಕಾದು ಕುಳಿತ ಪ್ರಸಂಗ ಕೂಡಾ ಇಂದು ನಡೆಯಿತು. ಇನ್ನು ಸರ್ಕಾರಿ ವಕೀಲರು ಗೈರು ಹಾಜರಾದ ಹಿನ್ನಲೆ ಕೆ.ಎನ್. ಸೋಮಶೇರ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ.
ಹೀಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವನ್ನು ಎನ್ಜಿಟಿ ತರಾಟೆಗೆ ತೆಗೆದುಕೊಂಡಿದೆ. ಇನ್ನು ವಕೀಲರ ಅನುಪಸ್ಥಿತಿ ಹಿನ್ನಲೆಯಲ್ಲಿ ವಿಚಾರಣೆಯನ್ನು ಸೆ,15 ಕ್ಕೆ ಮುಂದೂಡಲಾಗಿದೆ.