ಮಂಗಳೂರು, ಅ 28 (Daijiworld News/MSP): ಚೈಲ್ಡ್ಲೈನ್-1098 ದ.ಕ.ಜಿಲ್ಲೆ ಮತ್ತು ಜಿಲ್ಲಾಡಳಿತ ದ.ಕ.ಜಿಲ್ಲೆ, ಜಿಲ್ಲಾಮಕ್ಕಳ ರಕ್ಷಣಾ ಘಟಕ ದ.ಕ.ಜಿಲ್ಲೆ, ಮಂಗಳೂರು ಸೈಂಕ್ಲಿಂಗ್ ಕ್ಲಬ್, ಅಲೋಶಿಯನ್ ಬಾಯ್ಸ್ಹೋಮ್ ಮಂಗಳೂರು, ಜೀವನ್ದಾರ ಕುಲಶೇಖರ,ಸಹೋದಯ ಬೆಥನಿ, ಪರಿಸರ ಆಸಕ್ತರ ಒಕ್ಕೂಟ, ಓಯಸೀಸ್ ಸಂಸ್ಥೆ ಬೆಂಗಳೂರು, ಕೆಜಿವಿಎಸ್.ದ.ಕಜಿಲ್ಲೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮಕ್ಕಳ ಸಾಗಾಟ ಮತ್ತು ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾನುವಾರ, ಮಂಗಳೂರು ನಗರದಲ್ಲಿ ಬೈಸಿಕಲ್ ರ್ಯಾಲಿ, ಬೀದಿನ ನಾಟಕ ಮತ್ತು ಬೈಕ್ರ್ಯಾಲಿಯನ್ನು ಹಮ್ಮಿಕೊಳ್ಳುವ ಮೂಲಕ ಮಂಗಳೂರಿನ ನಗರದಾದ್ಯಾಂತ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮಂಗಳೂರು ಮಹಾನಗರ ಪಾಲಿಕೆಯೆದುರು ಮಂಗಳೂರು ಸೈಕ್ಲಿಂಗ್ ಕ್ಲಬ್ನ ನಿರ್ದೇಶಕರಾದ ಅನಿಲ್ಶೇಟ್ ಅವರ ನೇತೃತ್ವದಲ್ಲಿ 20 ಬೈಸಿಕಲ್ ಒಳಗೊಂಡ ಬೈಸಿಕಲ್ ರ್ಯಾಲಿಯನ್ನು ಆರಂಭಿಸಿದರು ಹಾಗೂ ಈ ಕಾರ್ಯಕ್ರಮದ ಉದ್ಘಾಟಣೆಯನ್ನು ಲಯನ್ಸ್ ಕ್ಲಬ್ ಕೂಳೂರು ಇದರ ಅದ್ಯಕ್ಷ ಪುರುಷೋತ್ತಮ ನೆರವೇರಿಸಿದರು ಹಾಗೂ ಈ ಸಂದರ್ಭದಲ್ಲಿ ಕೋಶಾಧಿಕಾರಿ ಮೋಹನ್ ಶೆಟ್ಟಿ, ಮಕ್ಕಳ ಕಲ್ಯಾಣ ಸಮಿತಿ ದ.ಕ.ಜಿಲ್ಲೆ ಇದರ ಅದ್ಯಕ್ಷ ರೆನ್ನಿ ಡಿಸೋಜ, ಶಿಕ್ಷಣ ಸಂಪನ್ಮೂಲ ಕೇಂದ್ರ ದ.ಕ.ಜಿಲ್ಲೆಯ ಅದ್ಯಕ್ಷ ಜಾಕಿರ್ ಹುಸೇನ್, ಸದಸ್ಯರಾದ ನಂದಾ ಪಯಸ್, ಸುರೇಶ್ ಶೆಟ್ಟಿ, ಚೈಲ್ಡ್ಲೈನ್-1098 ದ.ಕ.ಜಿಲ್ಲೆ ಇದರ ಕೇಂದ್ರ ಸಂಯೋಜನಾಧಿಕಾರಿಯಾದ ದೀಕ್ಷಿತ್ ಅಚ್ರಪ್ಪಾಡಿ, ನಗರ ಸಂಯೋಜನಾಧಿಕಾರಿಯಾದ ಶ್ರೀಮತಿ ಲವಿಟಾ ಮತ್ತು ತಂಡದ ಸದಸ್ಯರಾದ ಕೀರ್ತೇಶ್ ಕಲ್ಮಕಾರ್ ಮತ್ತು ರಂಜಿತ್ ಕಾಡುತೋಟ ಇವರು ಪಾಲ್ಗೊಂಡಿದ್ದರು. ಬೈಸಿಕಲ್ ಜಾತವು ಮಂಗಳೂರು ಮಹಾನಗರ ಪಾಲಿಕೆಯೆದುರಿನಿಂದ ಆರಂಭಗೊಂಡು ಕದ್ರಿ, ಬಲ್ಮಠ ಜ್ಯೋತಿ ಮಾರ್ಗವಾಗಿ ಜಿಲ್ಲಾಧಿಕಾರಿಯವರ ಕಚೇರಿಯ ಎದುರು ತಲುಪಿದ ನಂತರ ಸಹೋದಯಾ ಇನ್ಪೆಂಟ್ ಮೇರಿಸ್ ಹಾಸ್ಟೆಲಿನ ವಿದ್ಯಾರ್ಥಿಗಳಿಂದ ಜಿಲ್ಲಾಧಿಕಾರಿಯವ ಕಚೇರಿ ಹಾಗೂ ಮಂಗಳೂರಿನ ಕೆ.ಎಸ್.ಆರ್.ಟಿ.ಸಿ ನಿಲ್ದಾಣದಲ್ಲಿ ಮಕ್ಕಳ ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ಅರಿವು ಎಂಬ ಬೀದಿನಾಟಕವನ್ನು ಆಯೋಜಿಸಲಾಯಿತು. ಅಪರಾಹ್ನ ೧.೩೦ಕ್ಕೆ ಸರಿಯಾಗಿ ಬೆಂಗಳೂರು ಓಯಸಿಸ್ ಸಂಸ್ಥೆಯ ವತಿಯಿಂದ ಕೇಂದ್ರ ರೈಲ್ವೇ ನಿಲ್ದಾಣ ಹಾಗೂ ಲೇಡಿಗೋಷನ್ ಆಸ್ಪತ್ರೆ ಮತ್ತು ಸಾಯಂಕಾಲ ೫.೩೦ರ ಸುಮಾರಿಗೆ ಪಣಂಬೂರು ಬೀಚಿನಲ್ಲಿ ಬೀದಿನಾಟಕವನ್ನು ಮತ್ತು ಬೈಕ್ ರ್ಯಾಲಿಯನ್ನು ಆಯೋಜಿಸುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಅದ್ಯಕ್ಷರಾದ ಶ್ರೀ ರೆನ್ನಿ ಡಿಸೋಜ, ಪರಿಸರಾಸ್ಕರ ಒಕ್ಕೂಟದ ಅದ್ಯಕ್ಷರಾದ ಸುರೇಶ್ ಶೆಟ್ಟಿ, ಶಿಕ್ಷಣ ಸಂಪನ್ಮೂಲ ಕೇಂದ್ರ ದ.ಕ.ಜಿಲ್ಲೆಯ ಅಧ್ಯಕ್ಷರಾದ ಜಾಕಿರ್ ಹುಸೇನ್, ಕೆ.ಜಿವಿ.ಎಸ್ ದ.ಕ.ಜಿಲ್ಲೆಯ ಅದ್ಯಕ್ಷರಾದ ನಂದಾಪಯಾಸ್, ಬೆತನಿ ಸಹೋದಯಾ ಸೇವಾ ಕೇಂದ್ರ ಶಿಸ್ಟರ್ ಲೀನಾ ಡಿಸೋಜ, ಜೀವಂದಾರ ಸಂಸ್ಥೆಯ ಸಂಯೋಜಕಿ ಶಿಸ್ಟರ್ ಐಡಾ, ಚೈಲ್ಡ್ಲೈನ್-೧೦೯೮ ದ.ಕ.ಜಿಲ್ಲೆ ಇದರ ಕೇಂದ್ರ ಸಂಯೋಜನಾಧಿಕಾರಿಯಾದ ದೀಕ್ಷಿತ್ ಅಚ್ರಪ್ಪಾಡಿ, ನಗರ ಸಂಯೋಜನಾಧಿಕಾರಿಯಾದ ಶ್ರೀಮತಿ ಲವಿಟಾ ಮತ್ತು ತಂಡದ ಸದಸ್ಯರು ಹಾಗೂ ಬಂದರು ಪೊಲೀಸ್ ಠಾಣೆ ಮತ್ತು ಕೇಂದ್ರ ರೈಲ್ವೇ ಪೊಲೀಸ್ ಸಿಬ್ಬಂದಿಗಳು, ಸಂತ ಅಲೋಶಿಯಸ್ ಕಾಲೇಜ್ ಮತ್ತು ಎಮ್.ವಿ.ಶೆಟ್ಟಿ ಮತ್ತು ಸ್ಕೂಲ್ ಆಪ್ ಸೋಶಿಯಲ್ ವರ್ಕ್ ರೋಶನಿ ನಿಲಯದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.