ಮಂಗಳೂರು, ಅ 28 (DaijiworldNews/SM): ಸಾಮಾಜಿಕ ಜಾಲ ತಾಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಜನನುರಾಗಿಯಾಗಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ. ಹರ್ಷಾ ಅವರು ಇದೀಗ ಕರಾವಳಿ ಜನತೆಗೆ ತುಳುವಿನಲ್ಲಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ಆ ಮೂಲಕ ಕರಾವಳಿಗರ ಮನ ಗೆದ್ದಿದ್ದಾರೆ.
ಟ್ವಿಟರ್ ಖಾತೆಯಲ್ಲಿ ಡಾ. ಹರ್ಷಾ ಅವರು ತುಳುವಿನಲ್ಲಿ ಹಬ್ಬದ ಸಂದೇಶ ಹಾಗೂ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಈ ವರ್ಷದ ದೀಪಾವಳಿ ಸಂದರ್ಭದಲ್ಲಿ ಮಂಗಳೂರಿನಲ್ಲಿದ್ದ ಅವರು, ಕರಾವಳಿಯಲ್ಲಿಯೇ ಹಬ್ಬವನ್ನು ಆಚರಿಸಿದ್ದಾರೆ.
‘ಪ್ರತಿ ವರ್ಷ ನಾನು ನನ್ನ ಕುಟುಂಬದ ಸದಸ್ಯರೊಂದಿಗೆ ದೀಪಾವಳಿ ಆಚರಿಸುತ್ತಿದ್ದೆ. ಆದರೆ, ಈ ಸಲ ಮಂಗಳೂರೇ ನನ್ನ ಮನೆಯಾಗಿದೆ. ಮಂಗಳೂರಿನವರೇ ನನ್ನ ಕುಟುಂಬಸ್ಥರು ಎಂದು ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದೇನೆ. ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬಾಳನು ಬೆಳಗಿಸಲಿ. ಮಂಗಳೂರಿನ ಎಲ್ಲಾ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಪೊಲೀಸ್ ಕಮಿಷನರ್ ಡಾ. ಹರ್ಷಾ ಸಲ್ಲಿಸಿದ್ದಾರೆ.
ಅವರು ತುಳುವಿನಲ್ಲಿ ಮಾಡಿರುವ ಟ್ವಿಟ್ ಈ ರೀತಿ ಇದೆ. ‘ಪ್ರತೀ ವರ್ಷ ಯಾನ್ ಎನ್ನ ಪರಿವಾರದೊಟ್ಟುಗು ತುಡರ್ ಪರ್ಬೊನು ಆಚರಣೆ ಮಲ್ತೊಂದಿತ್ತೆ., ಈ ಸರ್ತಿ ಕುಡ್ಲನೇ ಎನ್ನ ಇಲ್ಲ್.. ಕುಡ್ಲದಕುಲೇ ಎನ್ನ ಪರಿವಾರ ಎನ್ನೊಂದು ತುಡರ್ ಪರ್ಬೊನು ಆಚರಣೆ ಮಲ್ತೊಂದುಲ್ಲೆ. ಈ ತುಡರ್ ಪರ್ಬ ಮಾತೆರ್ನ ಜೀವನೊಡು ಬೊಲ್ಪು ಕನವಡ್.. ಕುಡ್ಲದ ಮಾತ ಜನಕ್ಲೆಗ್ "ತುಡರ್ ಪರ್ಬದ ಉಡಲ್ ದಿಂಜಿನ ಮೋಕೆದ ಎಡ್ಡೆಪ್ಪು’ ಎಂದು ಬರೆಯುವ ಮೂಲಕ ತುಳುನಾಡಿನ ಜನತೆಯ ಮನಗೆದ್ದಿದ್ದಾರೆ.