ವೇಣೂರು, ಅ 30 (Daijiworld News/MSP): ಇತ್ತೀಚಿನ ಕೆಲ ದಿನಗಳಲ್ಲಿ ವೇಣೂರು ಪೋಲಿಸ್ ಠಾಣಾ ವ್ಯಾಪ್ತಿಯ ಕಾಶಿಪಟ್ಣ ಗ್ರಾಮದಲ್ಲಿ ಖಸಾಯಿಖಾನೆ ನಡೆಸಿ ಗೋಹತ್ಯೆ ಮಾಡಿ ಗೋ ಮಾಂಸದೊಂದಿಗೆ ವಿಡಿಯೋ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಪಡಿಸಿ ಕೋಮು ಪ್ರಚೋದನೆಗೆ ಮುಂದಾದ ನಾಲ್ವರನ್ನು ವೇಣೂರು ಪೋಲಿಸ್ ರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಕ್ರಮವಾಗಿ ಗೋ ಹತ್ಯೆ ಮಾಡಿದ ಕಾಶೀಪಟ್ಣ ಗ್ರಾಮ ನಿವಾಸಿ ಮನೆಯ ಮಾಲಕ ಅಬ್ದುಲ್ರಹಿಮಾನ್ ಮತ್ತು ಇತರ ಆರೋಪಿಗಳಾದ ಇಸ್ಮಾಯಿಲ್, ಇಬ್ರಾಹಿಂ, ಲತೀಫ್, ಅಶ್ರಫ್ ಇವರನ್ನು ವಶಕ್ಕೆ ಪಡೆಯಲಾಗಿದೆ ತನಿಖೆ ಮುಂದುವರಿಯುತ್ತಿದೆ.
ಕಾಶಿಪಟ್ಣ ಗ್ರಾಮದಲ್ಲಿ ರೈತರ ದನಕರುಗಳನ್ನು ರಾತೋರಾತ್ರಿ ಕಳ್ಳತನ ಮಾಡಿದ ಆರೋಪಿಗಳು ಮಾಂಸ ಮಾಡಿ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಮಾಡಲು ಬಿಟ್ಟಿದ್ದಾರೆ ಈ ಬಗ್ಗೆ ಪೋಲಿಸರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ವಿನಂತಿಸಿದ್ದರು. ಈ ಕುರಿತು ಅ. 27 ರಂದು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.