ಹೆಜಮಾಡಿ, ಅ 31 (Daijiworld News/MSP): ಡಿಸೆಂಬರ್ ಅಂತ್ಯದೊಳಗಾಗಿ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಂಸದ ನಳಿನ್ ತಿಳಿಸಿದ್ದಾರೆ. ಅವರು ಹೆಜಮಾಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬಳಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ವಿಳಂಬ ಕುರಿತಾದ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು.
ಸಂಸದೆ ಶೋಭಾ, ಕೇಂದ್ರ ಸಚಿವರಾದ ಸದಾನಂದ ಗೌಡ, ನಿತಿನ್ ಗಡ್ಕರಿ, ತಾನೂ ಸೇರಿದಂತೆ ಕೇಂದ್ರ ಸರಕಾರದ ಅಧಿಕಾರಿಗಳು, ನವಯುಗ ಅಧಿಕಾರಿಗಳೊಂದಿಗೆ ಮಾತುಕತೆಯನ್ನು ನಡೆಸಲಾಗಿದೆ. ತೊಕೊಟ್ಟು, ಪಂಪ್ವೆಲ್, ಪಡುಬಿದ್ರಿ, ಕುಂದಾಪುರ ಮುಂತಾದೆಡೆಗಳಲ್ಲಿ ಕೆಲಸ ನಿಧಾನ ಗತಿಯಲ್ಲಿ ಸಾಗಿದೆ.ಡಿಸೆಂಬರ್ ತಿಂಗಳಾಂತ್ಯದೊಳಗಾಗಿ ಈ ಭಾಗದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವುದುದಾಗಿ ನವಯುಗ ನಿರ್ಮಾಣ ಕಂಪೆನಿಯು ಹೇಳಿದೆ ಎಂದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ವಿಳಂಬ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿ ಸಂಸದ ನಳಿನ್ ಪ್ರತಿಕ್ರಿಯಿಸಿದರು.
ಸುರತ್ಕಲ್ ಟೋಲ್ ಬಗ್ಗೆ ಪರ್ತಕರ್ತರ ಪ್ರಶ್ನೆಗೆ, ಸುರತ್ಕಲ್ ಟೋಲ್ಗೇಟನ್ನು ಒಂದೋ ವಿಸರ್ಜಿಸಬೇಕು ಅಥವಾ ಬೇರೆ ಟೋಲ್ನೊಂದಿಗೆ ಹೊಂದಾಣಿಕೆ ಮಾಡಬೇಕಿದೆ. ಅದು ಇರ್ಕಾನ್ ಕಂಪೆನಿ ಮತ್ತು ಎನ್ಎಚ್ಎಐಗಳಿಗೆ ಸೇರಿರುವುದರಿಂದ ಸಮಸ್ಯೆ ಎನಿಸಿದೆ. ಈಗಾಗಲೇ ಎನ್ಎಚ್ಎಐಗೆ ಪತ್ರ ಬರೆಯಲಾಗಿದೆ. ಅದನ್ನು ವಿಸರ್ಜಿಸಬೇಕಾಗಿ ನಾವೂ ಒತ್ತಾಯಿಸಿದ್ದೇವೆ. ಕಾರ್ಯ ಪ್ರಗತಿಯಲ್ಲಿದೆ ಎಂದರು. ಎನ್ಎಂಪಿಟಿ ಬಳಿಯಲ್ಲಿನ ಡ್ರೆಜ್ಜರನ್ನು ೧೦ದಿನಗಳೊಳಗಾಗಿ ತೆರವುಗೊಳಿಸುವಂತೆ ಸೂಚಿಸಲಾಗಿದೆ. ಇಲ್ಲದಿದ್ದಲ್ಲಿ ಅದರಿಂದ ಮೀನಗಾರರಿಗೂ ತೊಂದರೆಯಾಗಲಿದೆ ಎಂದರು.
ಈ ಸಂದರ್ಭ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.