ಕಾಸರಗೋಡು, ಅ 31 (DaijiworldNews/SM): ಕುಂದಾಪುರ ಠಾಣಾ ವ್ಯಾಪ್ತಿಯ ಕುಂಭಾಶಿಯ ಹರಿಹರ ದೇವಸ್ಥಾನಕ್ಕೆ ಹೋಗುವ ತಿರುವು ರಸ್ತೆಯ ಉತ್ತರದಲ್ಲಿರುವ ಖಾಲಿ ಜಾಗದ ಬಳಿ ಐ20 ಕಾರಿನಲ್ಲಿ ಗಾಂಜಾ ಎಂಬ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕಾಳಾವರ ಗ್ರಾಮದ ನಿಶ್ಚಲ್ (22) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯಿಂದ 20,000 ರೂಪಾಯಿ ಮೌಲ್ಯದ 604 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಂಭಾಶಿಯ ಹರಿಹರ ದೇವಸ್ಥಾನಕ್ಕೆ ಹೋಗುವ ತಿರುವು ರಸ್ತೆಯ ಸಮೀಪ ಇಬ್ಬರು ನಿಂತುಕೊಂದು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದರು ಎನ್ನಲಾಗಿದ್ದು, ಈ ಬಗ್ಗೆ ದೊರೆತಂತಹ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.