ಮಂಗಳೂರು, ನ 01 (Daijiworld News/MB): ನಗರದ ಕಂಕನಾಡಿಯ ಬಳಿ ಇರುವ ಸ್ಪಾ ಮತ್ತು ಸೆಲೂನ್ ಮೇಲೆ ದಾಳಿ ನಡೆಸಿದ ಪೊಲೀಸರು ವೇಶ್ಯವಾಟಿಕೆಯ ಜಾಲವನ್ನು ಪತ್ತೆ ಹಚ್ಚಿರುವ ಘಟನೆ ನ 01 ರ ಗುರುವಾರ ನಡೆದಿದೆ.
ಕಂಕನಾಡಿಯ ವಾಣಿಜ್ಯ ಸಂಕೀರ್ಣದ ಸ್ಪಾ ಮತ್ತು ಸೆಲೂನ್ನಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರಕಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಇಬ್ಬರು ಪಿಂಪ್ಗಳಾದ ಮಂಗಳಾದೇವಿ ನಿವಾಸಿ ವಾಲಿದ್ ಖಾನ್ (34) ಹಾಗೂ ಉತ್ತರ ಪ್ರದೇಶ ಇಸ್ತಿಕಾರ್ (38)ರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಮಹಿಳಾ ಪಿಂಪ್ ವಿನೋದಾ ಎಂಬಾಕೆ ತಲೆಮರೆಸಿಕೊಂಡಿದ್ದಾಳೆ. ಐವರು ಸಂತ್ರಸ್ತ ಯುವತಿಯರನ್ನು ರಕ್ಷಿಸಲಾಗಿದೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.