ಮಂಗಳೂರು, ನ. 01 (DaijiworldNews/SM): ಪಠ್ಯದಿಂದ ಟಿಪ್ಪುವಿನ ಅಧ್ಯಾಯ ಹಿತೆಂಗೆಯುವ ವಿಚಾರದ ಕುರಿತು ಉಡುಪಿಯಲ್ಲಿ ಗೃಹಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿಯವರು "ಮುಖ್ಯಮಂತ್ರಿಗಳು ಈ ಕುರಿತು ಪರಿಶೀಲನೆ ಮಾಡುವುದಾಗಿ ಈಗಾಗಲೇ ಹೇಳಿದ್ದಾರೆ. ಯಾವುದೇ ವಿವಾದಾತ್ಮಕ ವಿಚಾರಗಳನ್ನು ಮಕ್ಕಳಿಗೆ ತಿಳಿಸಬಾರದು ಎಂಬ ದೃಷ್ಟಿಯಿಂದ ಅದನ್ನು ಮುಂದಿನ ದಿನಗಳಲ್ಲಿ ಪರಿಶೀಲನೆಯನ್ನು ಮಾಡುತ್ತೇವೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವರು " ಡ್ರಗ್ ಗೆ ಸಂಬಂಧಿಸಿದಂತೆ ಶೂನ್ಯ ಸಹನೆಯೊಂದಿಗೆ ಕೆಲಸ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈಗಾಗಲೇ ಇದಕ್ಕಾಗಿ ಸ್ಕ್ವಾಡ್ ಕೂಡಾ ಮಾಡಿದ್ದಾರೆ. ನನಗೆ ಸಂಪೂರ್ಣ ಮಾಹಿತಿ ನೀಡಬೇಕೆಂದೂ ಕೂಡಾ ಸೂಚಿಸಿದ್ದೇನೆ ಎಂದರು.