ಕುಂದಾಪುರ, ನ 2 (Daijiworld News/MB): ರೈಲಿನಲ್ಲಿ ಕಳವು ಮಾಡಿದವರನ್ನು ರೈಲ್ವೇ ಪೋಲಿಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತರನ್ನು ಉಪ್ಪಿನಂಗಡಿಯ ಅಬ್ದುಲ್ ರಶೀದ್(22) ಹಾಗೂ ಬಂಟ್ವಾಳದ ಇಸಾಕ್ (19) ಎಂದು ಗುರುತಿಸಲಾಗಿದೆ. ಭಟ್ಕಳದಲ್ಲಿ ನಿಧಾನವಾಗಿ ಚಲಿಸುತ್ತಿದ್ದ ನೇತ್ರಾವತಿ ಎಕ್ಸ್ ಪ್ರೆಸ್ ನಿಂದ ಕೆಳಗಿಳಿದು ಶಿರೂರು ಕಡೆ ಓಡುತ್ತಿದ್ದ ಮಾಹಿತಿ ಪಡೆದು ಬೆನ್ನಟ್ಟಿದ ಪೊಲೀಸರು ಅಂಡರ್ ಬ್ರಿಡ್ಜ್ ಅಡಿಯಲ್ಲಿ ಅಡಗಿ ಕುಳಿತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಇವರು ಬೈಂದೂರಿನಲ್ಲಿ ರೈಲು ಏರಿ ಮಹಿಳೆಯ ಬ್ಯಾಗ್ ಕಳ್ಳತನ ಮಾಡಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ. ಕಳ್ಳರ ಕೈಯಲ್ಲಿದ್ದ ಬ್ಯಾಗನ್ನು ವಶಪಡಿಸಿ ಶೋಧಿಸಿದಾಗ ಬ್ಯಾಗಿನಲ್ಲಿ ಹತ್ತು ಸಾವಿರ ಮೌಲ್ಯದ ಮೊಬೈಲ್ ಪೋನ್, 23,700 ನಗದು, ವಾಚ್, ಆಧಾರ್ ಕಾರ್ಡ್ ದೇವಾಲಯದ ರಶೀದಿ ದೇಣಿಗೆಗಳು ಕಂಡುಬಂದಿದೆ.
ಮೊಬೈಲಿಗೆ ಬಂದ ಕರೆಗಳನ್ನು ಆಧಾರಿಸಿ ವಿಚಾರಣೆ ನಡೆಸಿದಾಗ ಬ್ಯಾಗ್ ಕೇರಳ ಮೂಲದ ಸತ್ಯಭಾಮಾ ಮೆನನ್ ಎಂಬವರದು ಎಂದು ತಿಳಿದು ಬಂದಿದೆ. ಈ ಕಳ್ಳರ ಮೇಲೆ ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಪ್ರಾಯಾಣಿಕರ ಚೈನ್ನನ್ನು ಅಪಹರಿಸಿದ್ದಕ್ಕಾಗಿ ಈಗಾಗಲೇ ಶೋರ್ನೂರ್ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಾಲಾಗಿದೆ.