ಮಂಗಳೂರು, ನ 03 (Daijiworld News/MSP) : ನಗರದ ಬಂಟ್ಸ್ ಹಾಸ್ಟೆಲ್ ಸರ್ಕಲ್ ಸಮೀಪ ರಸ್ತೆ ಬದಿಯ ಗುಂಡಿಯೊಂದನ್ನು ಶನಿವಾರ ಟ್ರಾಫಿಕ್ ಪೂರ್ವ ಠಾಣೆಯ ಸಿಬ್ಬಂದಿ ಪುಟ್ಟ ರಾಮ ಅವರು ತಾನೇ ಕಲ್ಲು ಮಣ್ಣು ಹಾಕಿ ಮುಚ್ಚುವ ಮೂಲಕ ಜನಪರ ಕಾಳಜಿ ಮೆರೆದಿದ್ದಾರೆ.
ಗುಂಡಿಗಳಲ್ಲಿ ದ್ವಿಚಕ್ರವಾಹನ ಮತ್ತು ರಿಕ್ಷಾ ಚಾಲಕರು ಬಾರಿ ಪ್ರಯಾಸ ಪಡುತ್ತಿದ್ದರು ದ್ವಿಚಕ್ರ ಸವಾರರು ಅಪಘಾತಕ್ಕೆ ಈಡಾಗಿದ್ದರು.
ಹೀಗಾಗಿ ರಸ್ತೆ ಅವ್ಯವಸ್ಥೆಯ ಬಗ್ಗೆ ಪುಟ್ಟ ರಾಮ ಅವರು ವಿಡಿಯೋ ಮಾಡಿ ಮಂಗಳೂರು ನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ಈ ಹಿಂದೆ ತಂದಿದ್ದರು. ಆದರೆ ಸ್ಪಂದಿಸದ ಹಿನ್ನೆಲೆಯಲ್ಲಿ ಪುಟ್ಟ ರಾಮ ತಾವೇ ಗುಂಡಿ ಮುಚ್ಚಲು ನಿರ್ಧರಿಸಿ ಟೆಂಪೋದಲ್ಲಿ ಕಲ್ಲು ಮಣ್ಣು ತರಿಸಿ ಸ್ವತಹ ತಾವೇ ಗುಂಡಿಗಳನ್ನು ಮುಚ್ಚಿದ್ದಾರೆ.
ಖಾಲಿ ಹೋಗುತ್ತಿದ್ದ ಪಿಕಪ್ ಅನ್ನು ನಿಲ್ಲಿಸಿ ಕರಂಗಲ್ಪಾಡಿ ಯಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸ್ಥಳದಿಂದ ಕಲ್ಲು ಮಿಶ್ರಿತ ಮಣ್ಣುತರಿಸಿಕೊಂಡಿದ್ದಾರೆ. ಬಳಿಕ ತಾವೇ ಗುಂಡಿಗೆ ಮಣ್ಣು ಹಾಕಿ ಮುಚ್ಚಿದ್ದಾರೆ. ಇದನ್ನು ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಅವರ ಸಾಮಾಜಿಕ ಕಾಳಜಿಗೆ ನಗರ ಪೊಲೀಸ್ ಆಯುಕ್ತ ಡಾ. ಹರ್ಷ ಪಿ.ಎಸ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಲ್ಲದೆ ಸೋಮವಾರ ಕಚೇರಿಗೆ ಕರೆದು ಅವರನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.