ಉಡುಪಿ, ನ. 03 (DaijiworldNews/SM): ಘನತ್ಯಾಜ್ಯ ವಸ್ತು ನಿರ್ವಹಣೆ ೨೦೧೬ರ ಅನ್ವಯ ಮನೆ ಮನೆಯಲ್ಲಿ, ವಾಣಿಜ್ಯ ಮಳಿಗೆಯಲ್ಲಿ ಹಾಗೂ ಕಸ ಉತ್ಪಾದನೆ ಮಾಡುವವರೇ ಘನ ತ್ಯಾಜ್ಯ ವಸ್ತುಗಳನ್ನು ಹಸಿಕಸ, ಒಣಕಸ ಮತ್ತು ಅಪಾಯಕಾರಿ ಕಸವನ್ನು ಬೇರ್ಪಡಿಸಿ ಪ್ರತ್ಯೇಕವಾಗಿ ಕಸ ಸಂಗ್ರಹಿಸುವ ನಗರಸಭೆಯ ವಾಹನಕ್ಕೆ ನೀಡುವುದು ಕಡ್ಡಾಯವಾಗಿದೆ.
ಮನೆಗಳಲ್ಲಿ ಸಿಗುವ ಹಸಿ ತ್ಯಾಜ್ಯವನ್ನು ಮನೆಯಲ್ಲಿ ಕಾಂಪೋಸ್ಟ್ ಮಾಡುವ ಪ್ರಕ್ರಿಯೆಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಮ್ಮ ಮನೆಯಲ್ಲಿ ಚಾಲನೆ ನೀಡಿದ್ದಾರೆ. ಸಾರ್ವಜನಿಕರು ಹಸಿ ತ್ಯಾಜ್ಯವನ್ನು ಮನೆಯಲ್ಲಿಯೇ ಕಾಂಪೋಸ್ಟ್ ಮಾಡುವಂತೆ ಕರೆ ನೀಡಿರುತ್ತಾರೆ. ಆ ಮೂಲಕ ಪರಿಸರದ ಮೇಲೆ ತ್ಯಾಜ್ಯದಿಂದ ಉಂಟಾಗುವ ದುಷ್ಪರಿಣಾಮಗಳಿಂದ ಮುಕ್ತಿ ನೀಡಲು ಜಿಲ್ಲಾಧಿಕಾರಿಗಳು ಕಾರ್ಯಪ್ರವೃತರಾಗಿದ್ದಾರೆ.
ಇನ್ನು ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಪರಿಸರ ಅಭಿಯಂತರಿ ಸ್ನೇಹಾ ಕೆ.ಎಸ್, ಹಿರಿಯ ಆರೋಗ್ಯ ನಿರೀಕ್ಷಕ ಕರುಣಾಕರ ಮತ್ತು ಸ್ಯಾನಿಟರಿ ಸುಪರ್ ವೈಸರ್ ದಾಮೋದರ ಉಪಸ್ಥಿತರಿದ್ದರು.