ಮಂಗಳೂರು, ನ 7 (Daijiworld News/MSP): ನಗರದ ನವ ಬಂದರು ವ್ಯಾಪ್ತಿಯಲ್ಲಿ ನಡೆದ ಲಾರಿ ಅಪಘಾತದಲ್ಲಿ ಚಾಲಕ ವಿನೋದ್ ಪೂಜಾರಿ (50) ಮೃತಪಟ್ಟಿದ್ದಾರೆ, ಇವರು ವಾಮಂಜೂರಿನ ನಿವಾಸಿಯಾಗಿದ್ದಾರೆ.
ನ. 6 ರ ಬುಧವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಲಾರಿಯನ್ನು ಚಾಲಕ ವಿನೋದ್ ಅವರು ಚಲಾಯಿಸುತ್ತಿದ್ದರು, ಲಾರಿಯಲ್ಲಿ ಕಂಟೇನರ್ ಅನ್ನು ಲೋಡ್ ಮಾಡಿ ಬೇರೆಡೆಗೆ ಸಾಗಿಸುತ್ತಿದ್ದರು ಎನ್ನಲಾಗಿದೆ. ಲಾರಿಯನ್ನು ಓಡಿಸುತ್ತಿದ್ದ ವಿನೋದ್ ಪೂಜಾರಿ ರಸ್ತೆಯ ತಿರುವಿನಲ್ಲಿ ಬ್ರೇಕ್ ಹಾಕಿದಾಗ, ಕಂಟೇನರ್ ಮುಂದಕ್ಕೆ ಜಾರಿ, ಚಾಲಕನ ಕ್ಯಾಬಿನ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ, ವಿನೋದ್ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ. ಕಂಟೇನರ್ ಅನ್ನು ಸಮರ್ಪಕವಾಗಿ ಲೋಡ್ ಮಾಡದಿರುವುದು ಘಟನೆ ಕಾರಣ ಎನ್ನಲಾಗಿದೆ.