ಮಂಗಳೂರು, ನ 07(Daijiworld News/SS): ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್'ಗಳೂ ಸೇರಿದಂತೆ ರಾಜ್ಯದ ಒಟ್ಟು 14 ನಗರ ಸ್ಥಳೀಯ ಸಂಸ್ಥೆಗಳಿಗೆ ನವಂಬರ್ 12ರಂದು ಚುನಾವಣೆ ನಡೆಯಲಿದ್ದು, ಚುನಾವಣೆಗೆ ಸ್ಪರ್ಧಿಸಲಿರುವ ಎಲ್ಲಾ ಪಕ್ಷದ ಅಭ್ಯರ್ಥಿಗಳು ಭರದಿಂದ ಪ್ರಚಾರ ನಡೆಸುತ್ತಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ವಾರ್ಡ್'ಗಳಲ್ಲಿ ಬೆಂದೂರ್ ವಾರ್ಡ್ ಕೂಡಾ ಒಂದು. 38ನೇ ಬೆಂದೂರ್ ವಾರ್ಡಿನಿಂದ ಸತತ 3 ಬಾರಿ ಕಾರ್ಪೋರೇಟರ್ ಆಗಿ ಮಹತ್ವದ ಜವಾಬ್ದಾರಿ ಹೊತ್ತುಕೊಂಡು ಬೆಂದೂರ್ ವಾರ್ಡ್'ನ್ನು ಮಾದರಿ ವಾರ್ಡ್'ನ್ನಾಗಿ ರೂಪಿಸಿದ ಅನುಭವಿ ರಾಜಕಾರಣಿ ನವೀನ್ ಆರ್ ಡಿಸೋಜಾ. ಸಾಮಾನ್ಯರಲ್ಲಿ ಅತಿ ಸಾಮಾನ್ಯಾರಾಗಿ ಬೆರೆಯುವ ಸ್ವಭಾವ, ಹೊಸಹೊಸ ಯೋಜನೆಗಳನ್ನು ತಮ್ಮ ವಾರ್ಡ್'ಗೆ ತರುವಲ್ಲಿ ಯಶಸ್ವಿಯಾದ ಜನನಾಯಕ ನವೀನ್ ಆರ್ ಡಿಸೋಜಾ.
ವಾರ್ಡ್ ಸದಸ್ಯರ ಸಮಸ್ಯೆಗೆ ಸ್ಪಂದಿಸುತ್ತಾ ಪಾಲಿಕೆ ಹಾಗೂ ಸರಕಾರ ಒದಗಿಸಿದ ಅನುದಾನ, ಅವಕಾಶಗಳನ್ನು ತಮ್ಮ ವಾರ್ಡ್'ನಲ್ಲಿ ನವೀನ್ ಆರ್ ಡಿಸೋಜಾ ಸಮಪರ್ಕವಾಗಿ ಬಳಸಿಕೊಂಡಿದ್ದಾರೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ನವೀನ್ ಆರ್ ಡಿಸೋಜಾ ಹೆಚ್ಚಿನ ಒತ್ತು ನೀಡಿದ್ದಾರೆ. ರಸ್ತೆ, ಕುಡಿಯುವ ನೀರು, ವಿದ್ಯುತ್, ಒಳಚರಂಡಿ, ಇತ್ಯಾದಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಇವರ ಶ್ರಮ ಅಗಾಧವಾದುದು.
ಇದೀಗ ನವೀನ್ ಆರ್ ಡಿಸೋಜಾ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ 4ನೇ ಬಾರಿಗೆ ಬೆಂದೂರ್ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಮಾತ್ರವಲ್ಲ, ನವೀನ್ ಆರ್ ಡಿಸೋಜಾ ಅವರ ಪರವಾಗಿ ಬೆಂದೂರ್ ವಾರ್ಡಿನಲ್ಲಿ ಅಬ್ಬರದ ಪ್ರಚಾರ ಕೂಡ ನಡೆಯುತ್ತಿದೆ.
ನವೀನ್ ಆರ್ ಡಿಸೋಜಾರ ಅಭಿವೃದ್ಧಿ ಕಾರ್ಯಗಳು:
ಹೌದು, ನವೀನ್ ಆರ್ ಡಿಸೋಜಾ ತಮ್ಮ ಅಧಿಕಾರದ ಅವಧಿಯಲ್ಲಿ ತಮ್ಮ ವಾರ್ಡ್'ಗಾಗಿ ಸಾಕಷ್ಟೂ ಜನಪರ ಕೆಲಸಗಳನ್ನು ಮಾಡಿದ್ದಾರೆ. ಎಸ್. ಆರ್.ಡಿಸೋಜಾ ರಸ್ತೆ ಕೊನೆಯಲ್ಲಿ ರಸ್ತೆ ಕಾಂಕ್ರೀಟಿಕರಣ, ನೀರಿನ ಒಳಚರಂಡಿ ವ್ಯವಸ್ಥೆ ದುರಸ್ಥಿ, ಬಲ್ಮಠ ನ್ಯೂ ರೋಡ್ ಕೈರನ್ನ ಬಿಲ್ಡಿಂಗ್'ನಿಂದ ಗುಜರಿ ಅಂಗಡಿ ತನಕ ಫುಟ್ ಪಾತ್ ನಿರ್ಮಾಣ, ಎಸ್. ಸಿ.ಎಸ್ ರಸ್ತೆ ಅಗಲೀಕರಣ, ಕೊಳವೆ ನೀರಿನ ವ್ಯವಸ್ಥೆ, ಲೋಬೋ ಲೇನ್ ಫುಟ್ ಫಾತ್ ಸೇರಿದಂತೆ ರಸ್ತೆ ಡಾಮರೀಕರಣ ಮಾಡುವಲ್ಲಿ ಇವರ ಪಾತ್ರ ಮುಖ್ಯವಾಗಿತ್ತು.
ಮಾತ್ರವಲ್ಲ, ಬೆಂದೂರ್ 2ನೇ ರಸ್ತೆಯಲ್ಲಿ ಕಿರು ಸೇತುವೆ ನಿರ್ಮಾಣ ಕಾಮಗಾರಿ, ಅಥೆನಾ ಆಸ್ಪತ್ರೆಯಿಂದ ಪ್ಲಾಮಾ ಡೈಮಂಡ್ ಪ್ಲ್ಯಾಟ್ ತನಕ ರಸ್ತೆ ಕಾಂಕ್ರೀಟಿಕರಣ, ಫುಟ್ ಪಾತ್ ನಿರ್ಮಾಣ ಕಾಮಗಾರಿ, ಸಂಜೀವಿನಿ ಅಪಾರ್ಟ್'ಮೆಂಟ್ ಬಳಿ ರಸ್ತೆ ಕಾಂಕ್ರೀಟಿರಣ ನೀರಿನ ಕೊಳವೆ ಕಾಮಗಾರಿ, ಬಲ್ಮಠ ಶಾಂತಿನಿಲಯ ಮೈದಾನದ ಹಿಂಬಾಗದಲ್ಲಿ ಮುಖ್ಯರಸ್ತೆಗೆ ಕಾಂಕ್ರೀಟಿಕರಣ ಹಾಗೂ ಕುಟ್ಟಿ ಕಂಪೌಡ್, ಪಲ್ಸ್ ಕೌಂಪೌಡ್, ವಿಡೋಸ್ ಲೇನ್ ಹಾಗೂ ಮಹಿಳಾ ತರಬೇತಿ ಕೇಂದ್ರದ ಬಳಿಯ ರಸ್ತೆಗೆ ಕಾಂಕ್ರೀಟಿಕರಣ ಹಾಗೂ ಕೊಳವೆ ನೀರಿನ ವ್ಯವಸ್ಥೆ ಅಭಿವೃದ್ಧಿ ಸೇರಿದಂತೆ ಇಂಟರ್ ಲಾಕ್ ಅಳವಡಿಕೆ, ಕಂಕನಾಡಿ ಮಾರುಕಟ್ಟೆ ಹಿಂಭಾಗದಲ್ಲಿ ಸಲಫಿ ಸೆಂಟರ್ ಹಾಗೂ ಎಸ್ ಎಎಸ್ ಅಪಾರ್ಟ್ ಮೆಂಟ್ ನಡುವೆ ಎಲ್.ಇ.ಡಿ ಲೈಟ್ ಹಾಗೂ ಇಂಟರ್ ಲಾಕ್ ಅಳವಡಿಕೆ ಇವರ ಕಾರ್ಯ ವೈಖರಿಗಳು.
ನವೀನ್ ಆರ್ ಡಿಸೋಜಾ ಅವರ ಪರಿಶ್ರಮದಿಂದಾಗಿ ತಮ್ಮ ವಾರ್ಡಿನಲ್ಲಿ (ಕಂಕನಾಡಿ) 41 ಕೋಟಿ ರೂ ವೆಚ್ಚದ ಹೈಟೆಕ್ ಮಾರುಕಟ್ಟೆ ಸಂಕೀರ್ಣಕ್ಕೆ ಚಾಲನೆ ಸಿಕ್ಕಿದ್ದು, ವ್ಯಾಪಾರಕ್ಕೆ ತೊಂದರೆಯಾಗದಂತಹ ರೀತಿಯಲ್ಲಿ ಪುನರ್ವಸತಿ ಕಾಮಗಾರಿ ಆರಂಭಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.
ಜೊತೆಗೆ, ಎಸ್. ಎಇಎಸ್ ಆಸ್ಪತ್ರೆ ಕುತ್ತೋರಿಗುಡ್ಡೆ ಒಳಚರಂಡಿ ಮಂಜೂರಾತಿಯ ನಿರೀಕ್ಷೆಯಲ್ಲಿದ್ದು, ಕಂಕನಾಡಿ ವೃತ್ತ- ಐವರಿ ಕಂಕ್ಷನ್ ರಸ್ತೆ ಅಗಲೀಕರಣ ಕಾಮಗಾರಿ ಆರಂಭಗೊಂಡಿಷದೆ. ಮಾತ್ರವಲ್ಲ, ಬಲ್ಮಠ ನ್ಯೂ ರೋಡ್ ಕಾಂಕ್ರೀಟಿಕರಣ, ಫುಟ್ ಫಾತ್, ವಾಟರ್ ಡ್ರೈನ್, ರಸ್ತೆ ದೀಪ ನೀರಿನ ಸರಬರಾಜು ಕೂಡ ಪ್ರಗತಿಯಲ್ಲಿದ್ದು ತಮ್ಮ ವಾರ್ಡನ್ನು ಮಾದರಿ ವಾರ್ಡ್'ನ್ನಾಗಿ ನವೀನ್ ಆರ್ ಡಿಸೋಜಾ ರೂಪಿಸಿದ್ದಾರೆ.
ಈ ರೀತಿಯಾಗಿ ಒಂದಲ್ಲ, ಎರಡಲ್ಲ ಅನೇಕ ಅಭಿವೃದ್ಧಿ ಕಾರ್ಯಗಳೊಂದಿಗೆ ಜನ ಮೆಚ್ಚುಗೆ ಗಳಿಸಿರುವ ನವೀನ್ ಆರ್ ಡಿಸೋಜಾ ಮತ್ತೊಮ್ಮೆ ಬೆಂದೂರ್ ವಾರ್ಡ್'ನ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಮತ್ತಷ್ಟೂ ಅಭಿವೃದ್ಧಿ ಕೆಲಸಗಳನ್ನು ಮಾಡುವ ಇರಾದೆಯನ್ನು ಇಟ್ಟುಕೊಂಡಿದ್ದಾರೆ.