ಮಂಗಳೂರು, ನ 8 (Daijiworld News/MB): ನಗರದ ಅಂಬ್ಲಮೊಗರು ಬೆಳ್ಮ ದಲ್ಲಿ 2016ರ ಜು. 13ರಂದು ಬಾಲಕನ ಮೇಲೆ ನಡೆದ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಪ್ರಕರಣ ಸಾಬೀತಾಗಿದೆ.
ಅಂಬ್ಲಮೊಗರು ಬೆಳ್ಮ ರೆಂಜಾಡಿ ಜುಮ್ಮಾ ಮಸೀದಿ ಬಳಿ ನಿವಾಸಿ ಮಹಮ್ಮದ್ ಅಶ್ರಫ್ ಯಾನೆ ಅಶ್ರಫ್ (38) 11 ವರ್ಷದ 6ನೇ ತರಗತಿ ಓದುವ ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಮಾಡಿದ ಅಪರಾಧಿ.
2 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಆರೋಪ ಸಾಬೀತು ಪಡಿಸಿ, ತೀರ್ಪು ನೀಡಿ ಶಿಕ್ಷೆಯನ್ನು ಕಾಯ್ದಿರಿಸಿದ್ದಾರೆ.
ಈ ಪ್ರಕರಣದಲ್ಲಿ10 ಜನರನ್ನುಸಾಕ್ಷಿಯನ್ನಾಗಿ,10 ದಾಖಲಾತಿಗಳನ್ನು ಪರಿಗಣಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಠಾಣೆ ನಿರೀಕ್ಷಕ ಕೆ.ಆರ್. ಗೋಪಿಕೃಷ್ಣ, ಉಪ ನಿರೀಕ್ಷಕ ಶಿವಪ್ರಕಾಶ್ ದೋಷರೋಪಣ ಪಟ್ಟಿ ಸಲ್ಲಿಸಿದ್ದರು.
ಬಾಲಕ ಮತ್ತು ಅಜ್ಜಿ ಮನೆಯಲ್ಲಿದ್ದ ಸಂದರ್ಭದಲ್ಲಿ ಗುಜರಿ ಸಾಮಾಗ್ರಿ ಸಂಗ್ರಹಕ್ಕೆಂದು ಮನೆಗೆ ಬಂದ ಅಶ್ರಫ್ ಮನೆಯಲ್ಲಿ ಗುಜರಿ ಇಲ್ಲ ಎಂದರೂ ಒತ್ತಾಯ ಮಾಡಿ ಗುಜರಿ ಸಂಗ್ರಹಕ್ಕೆಂದು ಮನೆಯ ಹಿಂಭಾಗಕ್ಕೆ ಬಾಲಕನನ್ನು ಕರೆದೊಯ್ದು, ಲೈಂಗಿಕ ದೌರ್ಜನ್ಯ ನಡೆಸಿ ಪರಾರಿಯಾಗಿದ್ದಾನೆ. ಇದರಿಂದ ಆಘಾತಕ್ಕೊಳಗಾದ ಬಾಲಕ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಪೋಷಕರು ಉಳ್ಳಾಲ ಪೊಲೀಸು ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು.