ಮಂಗಳೂರು, ನ 8 (Daijiworld News/MSP): ಬೆಂಗಳೂರಿನ ಮಿಂಟೋ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಆರೋಪಿಸಿ ಹಲವು ಕಿರಿಯ ವೈದ್ಯರು, ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಾಂತ ನಡೆಸುತ್ತಿದ್ದ ಪ್ರತಿಭಟನೆ ಇದೀಗ ಗಂಭೀರ ಸ್ವರೂಪ ಪಡೆದಿದ್ದು, ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಗಳ ಒಪಿಡಿ ವಿಭಾಗವೂ ಕಾರ್ಯ ಸ್ಥಗಿತಗೊಳಿಸಲಾಗಿವೆ.
ಐಎಂಎ ಅಧ್ಯಕ್ಷರಾದ ಮಂಗಳೂರು ಶಾಖೆಯ ಡಾ|ಎಂ ಅಣ್ಣಯ್ಯ ಕುಲಾಲ್ ಮತ್ತು ಉಡುಪಿ ಶಾಖೆಯ ಡಾ| ಉಮೇಶ್ ಪ್ರಭು ಪ್ರತಿಕ್ರಿಯಿಸಿ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸುತ್ತೇವೆ. ಇದೇ ಕಾರಣಕ್ಕಾಗಿ ಶುಕ್ರವಾದ ಖಾಸಗಿ ಒಪಿಡಿ ವಿಭಾಗ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ವೈದ್ಯರು ಕಪ್ಪು ಪಟ್ಟಿ ಧರಿಸಿ ಸೇವೆ ನೀಡಲಿದ್ದಾರೆ ಎಂದಿದ್ದಾರೆ. ಈ ರೀತಿಯ ಘಟನೆಗಳು ಪುನಃ ನಡೆಯದಂತೆ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.