ಬೆಂಗಳೂರು ಜ 10: ರಾಜ್ಯದ 2018 ರ ವಿಧಾನ ಸಭೆ ಚುನಾವಣೆಯ ವೇಳಾಪಟ್ಟಿ ಮಾರ್ಚ್ ಅಂತ್ಯಕ್ಕೆ ಪ್ರಕಟವಾಗುವ ಸಾಧ್ಯತೆ ಇದೆ. ಇನ್ನು ಈ ಬಾರಿ ಎರಡು ಹಂತಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಏಪ್ರಿಲ್ ಅಂತ್ಯ ಅಥವಾ ಮೇ ಮೊದಲ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಜ 9 ರ ಮಂಗಳವಾರ ನಡೆದ ವಿಕಾಸಸೌಧದಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿ ಹಾಗೂ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿದೆ.
ಇದೇ ವೇಳೆ ಸಾಕಷ್ಟು ಅನುಮಾನ ಗೊಂದಲಕ್ಕೆ ಕಾರಣವಾಗಿರುವ ವಿದ್ಯನ್ಮಾನ ಮತಯಂತ್ರಗಳನ್ನು ಬದಲಿಗೆ ಹಿಂದಿನಂತೆ ಪೇಪರ್ ವ್ಯಾಲೆಟ್ ಗಳನ್ನೇ ಮತ್ತೆ ಬಳಸುವಂತೆ ಹೆಚ್ಚಿನ ಪಕ್ಷಗಳು ಮನವಿ ಮಾಡಿದೆ. ಆದರೆ ಈ ಮನವಿಯನ್ನು ಅಧಿಕಾರಿಗಳು ತಳ್ಳಿ ಹಾಕಿದರು ಎಂದು ಮಾಧ್ಯಮ ಮೂಲಗಳು ತಿಳಿಸಿವೆ.