ಉಡುಪಿ, ನ 10 (Daijiworld News/MB) :ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಇಂಜಿನಿಯರಿಂಗ್ ಪದವೀಧರ ಯುವಕ ಮೃತಪಟ್ಟಿದ್ದಾನೆ.
ಮೃತ ಯುವಕ ಗ್ರೇಗ್ ಮೈಕಲ್ ಕಾರ್ಡಿನ್ (23) ಇಲ್ಲಿನ ಕಲ್ಯಾಣಪುರದ ನಿವಾಸಿಯಾಗಿದ್ದು, ಬೈಕ್ ಚಲಾಯಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಶನಿವಾರ ನ 9 ರಂದು ಗ್ರೇಗ್ ಬೈಕ್ ಚಲಾಯಿಸುತ್ತಿದ್ದಾಗ ಬೇಕ್ ಗೆ ಎದುರಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ಪರಿಣಾಮ ಗ್ರೇಗ್ ರಸ್ತೆಗೆ ಬಿದಿದ್ದು ತೀವ್ರವಾದ ಗಾಯ ಉಂಟಾಗಿದೆ. ಗ್ರೇಗ್ ಅನ್ನು ಆಸ್ಪತ್ರೆಗೆ ಕರೆತರುವಾಗ ಸಾವನ್ನಪ್ಪಿದ್ದಾರೆ.
ಈ ಕುರಿತಂತೆ ಏರ್ ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.