ಮಲ್ಪೆ ಜ 10: ಮಲ್ಪೆಯ ಸಮುದ್ರ ತೀರದಲ್ಲಿ ಅಲೆಗಳೊಂದಿಗೆ ಆಡಿ ಖುಷಿಪಡಲು ಬಂದಿದ್ದ ಪ್ರವಾಸಿಗರು ಸಮುದ್ರವನ್ನು ಕಂಡು ಮಂಗಳವಾರ ಅಚ್ಚರಿಪಟ್ಟರು. ನೀಲಸಾಗರ ಹಸಿರು ಸಾಗರವಾಗಿ ತನ್ನ ಬಣ್ಣ ಬದಲಾಯಿಸಿತ್ತು. ಇದು ಅಲ್ಲಿ ನೆರೆದಿದ್ದವರ ಅಚ್ಚರಿಗೆ ಕಾರಣವಾಯಿತು. ಸಮುದ್ರ ತಳದಲ್ಲಿ ದೊಡ್ಡ ಬಂಡೆಗಲ್ಲುಗಳ ಅಡಿ ಬೆಳೆದ ಪಾಚಿ ಬಲವಾದ ಗಾಳಿಗೆ ಮೇಲೆ ಬಂದು ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಲು ಕಾರಣವಾಗಬಹುದು ಎನ್ನುವುದು ಕೆಲವರ ಅಂಬೋಣ.ಆದರೂ ಸಮುದ್ರದ ನೀರು ಕೆಂಪು ಬಣ್ಣಕ್ಕೆ ತಿರುಗುವುದು ಸಾಮಾನ್ಯ, ಹಸಿರು ವರ್ಣಕ್ಕೆ ತಿರುಗುವುದು ಬಹಳ ಅಪರೂಪ. ಆದರೆ ಕಣ್ಣಿಗೆ ಮುದ ನೀಡುವ ಹಸಿರು ಬಣ್ಣದ ನೀರು ಜಲಚರಕ್ಕೆ ಮಾತ್ರ ಒಳ್ಳೆಯದಲ್ಲ ಎನ್ನುತ್ತಾರೆ ಸ್ಥಳೀಯ ಮೀನುಗಾರರು.
ಸಾಂದರ್ಭಿಕ ಚಿತ್ರ