ಮಂಗಳೂರು, ನ.11(Daijiworld News/SS): ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಭರದ ಸಿದ್ಧತೆ ನಡೆಯುತ್ತಿದ್ದು, ನವೆಂಬರ್ 12ರಂದು ಪಾಲಿಕೆಯ ವ್ಯಾಪ್ತಿಯ 60 ವಾರ್ಡ್ಗಳಿಗೆ ಚುನಾವಣೆ ನಡೆಯಲಿದೆ.
ನಗರದ ರೋಸರಿಯು ಶಾಲೆಯಲ್ಲಿ ಮತಗಟ್ಟೆಗೆ ಸಾಗಿಸಲು ಮತಯಂತ್ರಗಳನ್ನು ಸಜ್ಜು ಮಾಡಲಾಗುತ್ತಿದ್ದು, ಮತಗಟ್ಟೆಗಳಿಗೆ ಮತಯಂತ್ರವನ್ನ ಸಾಗಿಸಲು ಸಕಲ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ ಒಟ್ಟು 60 ವಾರ್ಡ್ಗಳಿದೆ. ಈ ವಾರ್ಡ್'ಗಳಿಗೆ ಒಟ್ಟು 12 ಚುನಾವಣಾಧಿಕಾರಿ, 12 ಉಪ ಚುನಾವಣಾಧಿಕಾರಿಗಳಿದ್ದಾರೆ. ಒಟ್ಟು 448 ಬೂತ್ಗಳಿದ್ದು ಇದಕ್ಕೆ 485 ಪ್ರತಿಯೊಂದು ಬೂತ್'ಗೂ ತಲಾ ಒಬ್ಬರಂತೆ ಮತಗಟ್ಟೆ ಅಧ್ಯಕ್ಷ ಅಧಿಕಾರಿ (ಪಿಆರ್ಒ), ಸಹಾಯಕ ಅಧ್ಯಕ್ಷಾಧಿಕಾರಿಗಳನ್ನು (ಎಪಿಆರ್ಒ) ನೇಮಕ ಮಾಡಲಾಗಿದೆ. ಮಾತ್ರವಲ್ಲ, ಹೆಚ್ಚುವರಿಯಾಗಿ ಶೇ.30ರಷ್ಟು ಅಧಿಕಾರಿಗಳನ್ನು, ಸಿಬಂದಿಗಳನ್ನು ಕಾಯ್ದಿರಿಸಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್ಗೆ ಒಟ್ಟು 234 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ 66, ಬಿಜೆಪಿ 94, ಜೆಡಿಎಸ್ 14, ಸಿಪಿಐ 1, ಸಿಪಿಎಂ 8, ಎಸ್ಡಿಪಿಐ 10, ಜೆಡಿಯು 2, ಡಬ್ಲ್ಯೂಪಿಐ 3, ಕರ್ನಾಟಕ ರಾಷ್ಟ್ರ ಸಮಿತಿ 3, ಪಕ್ಷೇತರರು 35 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.