ಮಂಗಳೂರು, ನ 11 (Daijiworld News/MSP): ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ರಂಗೇರುತ್ತಿದ್ದು "ಸ್ವಚ್ಚ, ಪ್ರಾಮಾಣಿಕ ಹಾಗು ಜನಪರ ರಾಜಕಾರಣ " ಎಂಬ ಸಿದ್ದಾಂತವಿಟ್ಟುಕೊಂಡಿರುವ ಕರ್ನಾಟಕ ರಾಷ್ಟ್ರ ಸಮಿತಿ ಈ ಚುನಾವಣೆಯಲ್ಲಿ ಖಾತೆ ತೆರೆಯಬೇಕೆಂದು ಪಣ ತೊಟ್ಟಿದ್ದು ಇದಕ್ಕಾಗಿ ಬೆಂಗಳೂರಿನಿಂದ ಕಾರ್ಯಕರ್ತರನ್ನು ಕರೆಸಿ ಪ್ರಚಾರ ನಡೆಸಿದೆ.
ವಾರ್ಡ್ ನಂ. 22 ಕದ್ರಿ ಪದವು ಅಭ್ಯರ್ಥಿ ಅವಿನಾಶ್ ಮತ್ತು ವಾರ್ಡ್ ನಂ. 24 ದೇರೆಬೈಲ್ ಅಭ್ಯರ್ಥಿ ಹ್ಯಾರಿ
ಕರ್ನಾಟಕ ರಾಷ್ಟ್ರ ಸಮಿತಿಯಿಂದ ಅವಿನಾಶ್ ವಾರ್ಡ್ ನಂ. 22 ಕದ್ರಿ ಪದವು, ಹ್ಯಾರಿ ವಾರ್ಡ್ ನಂ. 24 ದೇರೆಬೈಲ್, ಚುನಾವಣಾ ಟಿಕೆಟ್ ಪಡೆದಿದ್ದಾರೆ.
ಅಭ್ಯರ್ಥಿಗಳು ವಿದ್ಯಾವಂತರಾಗಿದ್ದು ಸಮಾಜದ ಸೇವೆ ಮಾಡುವ ಹಂಬಲ ಹೊಂದಿದ್ದಾರೆ.24 ವಾರ್ಡ್ ನಿಂದ ಸ್ಪರ್ಧಿಸ ಬಯಸಿರುವ ಹ್ಯಾರಿ ಯವರು ಕೊಂಕಣಿ ಹಾಗೂ ಕನ್ನಡ ಚಿತ್ರಗಳಲ್ಲಿ ಖಳ ಹಾಗೂ ಪೋಷಕ ನಟನಾಗಿ ಅಭಿನಯಿಸಿದ್ದಾರೆ. ವಾರ್ಡಿನ ಸಮಸ್ಯೆ ಗಳಿಗೆ ಸೂಕ್ತ ಪರಿಹಾರ ನೀಡುವ ಉದ್ದೇಶದಿಂದ ಸ್ವತಃ ತಾನೇ ವಾರ್ಡಿನಾದ್ಯಂತ ಸಂಚರಿಸಿ ಮತ ನೀಡಬೇಕೆಂದು ಕೇಳಿಕೊಳ್ಳುತ್ತಿದ್ದಾರೆ.
ಕದ್ರಿ ಪದವಿನಿಂದ ಸ್ರರ್ಧಿಸಿರುವ ಅವಿನಾಶ್ ರದ್ದು ಯುವ ರಕ್ತ. ಇನ್ನೂ ಚಿಕ್ಕ ವಯಸ್ಸಿದ್ದರೂ ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗಬೇಕು ಎಂಬ ತುಡಿತ ಇದೆ.
ಮಹಾನಗರ ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ, ಭ್ರಷ್ಟಾಚಾರಕ್ಕೆ ಕಡಿವಾಣ, ಆಧುನಿಕ ತಂತ್ರಜ್ಜಾನ ಬಳಸಿ ನಾಗರಿಕರಿಗೆ ತ್ವರಿತ ಸೇವೆ, ಸ್ಮಾರ್ಟ್ ಸಿಟಿ ಯೋಜನೆಗಳ ಅನುಷ್ಠಾನ, ಸೋರಿಕೆ ಇಲ್ಲದ ತೆರಿಗೆ ಸಂಗ್ರಹ, ನಿರಂತರ ಕುಡಿಯುವ ನೀರು ಪೂರೈಕೆ, ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವೈಜ್ಜಾನಿಕ ಕಸ ವಿಲೇವಾರಿ, ವಾರ್ಡ್ ಸಮಿತಿಗಳ ರಚನೆ, ಮೂಲಭೂತ ಸೌಕರ್ಯಗಳ ಕಾಮಗಾರಿಗಳನ್ನು ಸಮಯಮಿತಿಯಲ್ಲಿ ಪೂರ್ಣ ಮಾಡುವುದೂ ಸೇರಿದಂತೆ ಹಲವು ಆಕಾಂಕ್ಷೆಗಳನ್ನು ಪಕ್ಷ ಹೊಂದಿದೆ.
ಒಟ್ಟಾರೆ ಕೃಷ್ಣಾ ರೆಡ್ಡಿ ಸ್ಥಾಪಿಸಿರುವ ಈ ಪಕ್ಷವು ಲಂಚ ಮುಕ್ತ ಕರ್ನಾಟಕ ಧ್ಯೇಯ, ಸ್ವಚ್ಛ, ಸ್ವಸ್ಥ ಹಾಗೇ ಸಮೃದ್ಧ ಕರ್ನಾಟಕ ಕಟ್ಟಲು ಈ ಮಹಾನಗರ ಪಾಲಿಕೆ ಚುನಾವಣೆಯು ಮಹತ್ವದ್ದಾಗಿದೆ.