ಮಂಗಳೂರು ಜ 10 : ದೀಪಕ್ ರಾವ್ ಹತ್ಯೆ ಕೇಸ್ ನಲ್ಲಿ ತನ್ನ ಮೇಲೆ ಹತ್ಯೆ ಆರೋಪ ಹೊರಿಸಿದವರ ವಿರುದ್ದ ಮಂಗಳೂರಿನ ಬಿಜೆಪಿ ಕಾರ್ಪೋರೇಟರ್ ತಿಲಕ್ ರಾಜ್ ದೈವದ ಮೊರೆ ಹೋಗಿದ್ದಾರೆ. ಕೃಷ್ಣಾಪುರದ ಶ್ರೀ ಕೋಡ್ದಬ್ಬು ದೈವಸ್ಥಾನದಲ್ಲಿ ನಾಗದೇವರನ್ನು ಮುಂದಿಟ್ಟುಕೊಂಡು ಶ್ರೀ ಕೋಡ್ದಬ್ಬು, ರಾಹು ಗುಳಿಗ ಪರಿವಾರ ದೈವಗಳಲ್ಲಿ ಗುರಿಕಾರರು ಹಾಗೂ ಊರಿನ ಹಿರಿಯರು, ಸರ್ವ ಭಕ್ತರು ಸೇರಿ ಅಪಪ್ರಚಾರ ಮಾಡುತ್ತಿರುವವರಿಗೆ ಬುದ್ದಿ ಕಲಿಸುವಂತೆ ಭಕ್ತಿಪೂರ್ವಕ ಪ್ರಾರ್ಥನೆ ಸಲ್ಲಿಸಿದರು. ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೇ ತಿಲಕ್ ರಾಜ್ ವಿರುದ್ದ ಸಾಮಾಜಿಕ ತಾಣಗಳಲ್ಲೂ ಅಪಪ್ರಚಾರ ನಡೆಸಲಾಗಿತ್ತು. ಅತ್ಯಂತ ಕೆಟ್ಟ ಪದ ಬಳಸಿ ತಿಲಕ್ ರಾಜ್ ವಿರುದ್ದ ಸುಳ್ಳು ಮಾಹಿತಿ ಹಬ್ಬಲಾಗಿತ್ತು. ಹೀಗಾಗಿ ಕೃಷ್ಣಾಪುರ ಗ್ರಾಮಸ್ಥರು ದೈವದ ಮೊರೆ ಹೋಗಿದ್ದು, ಅಲ್ಲಿಗೆ ತಿಲಕ್ ರಾಜ್ ರನ್ನ ಕೂಡ ಕರೆಸಿ ಪ್ರಾರ್ಥನೆ ಮಾಡಿಸಿದ್ದಾರೆ. ಈ ನಡುವೆ ಸಾಮಾಜಿಕ ತಾಣಗಳಲ್ಲಿ ಅಪಪ್ರಚಾರ ಮಾಡಿದವರ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಗೂ ದೂರನ್ನು ಕೂಡ ನೀಡಲಾಗಿದೆ.