ಮಂಗಳೂರು, ನ 12 (Daijiworld News/MSP): ನವಮಂಗಳೂರು ಬಂದರಿಗೆ ಪ್ರವಾಸಿಗರನ್ನು ಹೊತ್ತ ಮತ್ತೊಂದು ವಿದೇಶಿ ಪ್ರವಾಸಿ ಹಡಗು ಆಗಮಿಸಿದೆ. ಕೋಸ್ಟಾ ವಿಕ್ಟೋರಿಯಾ ಎಂಬ ಈ ಬೃಹತ್ ಹಡಗಿನಲ್ಲಿ 1,600 ವಿದೇಶಿ ಪ್ರವಾಸಿಗರು, 600 ಸಿಬ್ಬಂದಿಯಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಎನ್ಎಂಪಿಟಿಗೆ ಆಗಮಿಸಿದ 2ನೇ ಬೃಹತ್ ಹಡಗು ಇದಾಗಿದೆ. ನ.12 ರ ಮಂಗಳವಾರ ಬೆಳಗ್ಗೆ ಎನ್.ಎಮ್.ಪಿ.ಟಿ ತಲುಪಿದೆ. ಪ್ರವಾಸಿಗರು ಮಂಗಳೂರಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಣೆ ಮಾಡಲಿದ್ದಾರೆ.