ಮಂಗಳೂರು, ನ 12 (DaijiworldNews/SM): ಕೊಂಕಣಿ ರಂಗ ಕಲಾವಿದೆ ಮಿನ್ನ ರುಜಾಯಿ ಎಂದೇ ಖ್ಯಾತಿ ಗಳಿಸಿದ್ದ ತೆರೆಸಾ ಮಿರಾಂದ ನವಂಬರ್ 12ರ ಮಂಗಳವಾರದಂದು ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.
ತೆರೆಸಾ ಅವರು ಕೊಂಕಣಿ ಭಾಷೆಯ ಹಲವಾರು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದರು. ಇವರು ಕೊಂಕಣಿ ಕಲಾ ಕ್ಷೇತ್ರದ ಪ್ರಸಿದ್ಧ ನಿರ್ದೇಶಕ ಹಾಗೂ ನಟ ಬೆನ್ನ ರುಜಾಯಿಯವರ ಧರ್ಮಪತ್ನಿಯಗಿದ್ದಾರೆ.
ಬೆನ್ನ ಹಾಗೂ ಮಿನ್ನ ಅವರು ಹಲವು ನಾಟಕಗಳಲ್ಲಿ ಜತೆಯಾಗಿ ನಟಿಸಿ ಪ್ರೇಕ್ಷಕರಿಗೆ ಕಲಾ ರಸದೌತನ ನೀಡಿದ್ದಾರೆ. ಇದೀಗ ಅವರು ಕೊಂಕಣಿ ಕಲಾ ಕ್ಷೇತ್ರದಿಂದ ದೂರವಾಗಿದ್ದು, ಅಭಿಮಾನಿಗಳನ್ನು ದುಃಖತಪ್ತಗೊಳಿಸಿದೆ.