ಉಪ್ಪಿನಂಗಡಿ , ನ13 (Daijiworld News/ MB): ಶಾಲಾ ಅತಿಥಿ ಶಿಕ್ಷಕಿಯಾಗಿದ್ದ ಯುವತಿಯ ಮೇಲೆ ಅತ್ಯಾಚಾರಗೈದ ಆರೋಪದಲ್ಲಿ ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ (41) ಅವರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಮುಖ್ಯ ಶಿಕ್ಷಕರಾದ ಮಂಜುನಾಥ್ ತನ್ನ ಕೆಲಸವನ್ನು ಖಾಯಂ ಮಾಡುವುದಾಗಿ ಆಮಿಷವೊಡ್ಡಿ ಎಪ್ರಿಲ್ 14 ರಂದು ಅತ್ಯಾಚಾರ ಮಾಡಿದ್ದಾರೆ ಎಂದು ಸುಮಾರು 7 ತಿಂಗಳ ಬಳಿಕ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 28 ವರ್ಷದ ಅತಿಥಿ ಶಿಕ್ಷಕಿ ದೂರು ಸಲ್ಲಿಸಿದ್ದರು. ಘಟನೆಯಿಂದ ಆತಂಕಗೊಂಡಿದ್ದ ನಾನು ಈ ಕುರಿತು ಯಾವುದೇ ದೂರು ಸಲ್ಲಿಸಿರಲಿಲ್ಲ ಎಂದು ತಿಳಿಸಿದ್ದರು.
ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ ನನ್ನು ಪೊಲೀಸರು ನವೆಂಬರ್ 12 ರ ಮಂಗಳವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ 15 ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ದೂರು ನೀಡಿರುವ ಅತಿಥಿ ಶಿಕ್ಷಕಿಯ ಉಪನ್ಯಾಸ ಶೈಲಿ ಉತ್ತಮವಿಲ್ಲವೆಂದು ಆಕೆಯನ್ನು ಕೆಲಸದಿಂದ ತೆಗೆದು ಹಾಕಿ ಬದಲಿ ಅತಿಥಿ ಶಿಕ್ಷಕಿಯನ್ನು ನೇಮಿಸಲಾಗಿತ್ತು.