ತುಮಕೂರು ಜ 11 : ಇಲ್ಲಿನ ಕುಂಕುಮನಹಳ್ಳಿ ನಿವಾಸಿಯಾದ ಚೈತ್ರಾ (26) ಎಂಬಾಕೆ, ಮುಸ್ಲಿಂ ಸಮಯದಾಯದಕ್ಕೆ ಸೇರಿದ ಯುವಕ ಸಾಜೀದ್ ಖಾನ್ (30) ನನ್ನು ಸುಮಾರು ಏಳು ವರ್ಷಗಳಿಂದ ಪ್ರೀತಿಸುತ್ತಿದ್ದು ಇದೀಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಆದರೆ ಈ ವಿವಾಹಕ್ಕೆ ಯುವತಿ ಚೈತ್ರಾ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಪೋಷಕರಿಂದ ಇದೊಂದು ಲವ್ ಜಿಹಾದ್ ಆರೋಪಿಸಲಾಗಿದೆ. ಯುವತಿ ಚೈತ್ರಾ ಬೆಂಗಳೂರಿನಲ್ಲಿ ಸಾಫ್ಟವೇರ್ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಆದರೆ ಯುವಕ ಸಾಜೀದ್ ಖಾನ್ ಒಬ್ಬ ಆಟೋ ಚಾಲಕನಾಗಿದ್ದಾನೆ, ಒಂದೇ ಗ್ರಾಮದವರಾದ ಇವರು ಇದೀಗ ವಿವಾಹವಾಗಿದ್ದಾರೆ. ಆದ್ರೆ ಹುಡುಗಿಯ ತಂದೆ ಈ ವಿವಾಹದಿಂದ ನೊಂದಿದ್ದು ಠಾಣೆಯ ಮುಂದೆ ಬಂದು ಲವ್ ಜಿಹಾದ್ಗೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದಾರೆ. ಆದರೆ ಇದನ್ನು ನವ ವಿವಾಹಿತ ಜೋಡಿ ತಿರಸ್ಕರಿಸಿದ್ದಾರೆ.
ತುಮಕೂರು ಗ್ರಾಮಾಂತರ ಠಾಣೆಗೆ ಆಗಮಿಸಿದ್ದ ಜೋಡಿಗಳು ತಾವಿಬ್ಬರು ಮನಸಾರೆ ಪ್ರೀತಿಸಿದ್ದು, ನಾವಿಬ್ಬರು ಪರಸ್ಪರ ಒಪ್ಪಿಗೆಯಿಂದ ವಿವಾಹವಾಗಿದ್ದೇವೆ, ವಿವಾಹ ನೋಂದಣಿ ಕೂಡಾ ಆಗಿದೆ ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.