ಜ 11: ಮೂಡಿಗೆರೆ ಡಿಎಸ್ ಬಿಜಿ ಕಾಲೇಜು ವಿದ್ಯಾರ್ಥಿನಿ, ಯಾದವ ಸುವರ್ಣ ಅವರ ಪುತ್ರಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣ ಪ್ರಮುಖ ಆರೋಪಿ ಸಂತೋಷ್ ಯಾನೆ ರಾಜೇಶ್ (20)ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಬಂಟ್ವಾಳದ ಬಡಗ ಕಜೆಕಾರ್ನಲ್ಲಿ ಲಿಫ್ಟ್ ಮೆಕ್ಯಾನಿಕ್ ಆಗಿ ರಾಕೇಶ್ ಕೆಲಸ ಮಾಡುತ್ತಿದ್ದ. ಮೂಡಿಗೆರೆ ಪಿಎಸ್ಐ ರಫೀಕ್ ಮತ್ತು ಸಿಬ್ಬಂದಿ ಈತನನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಸಂತೋಷ್ ನನ್ನು ಹುಡುಕುತ್ತಾ ಬೆಳ್ತಂಗಡಿಗೂ ಪೊಲೀಸರು ಈ ಹಿಂದೆ ಬಂದು ಹೋಗಿದ್ದರು.