ಸುಳ್ಯ, ನ 14(Daijiworld News/MSP): ಬೈಕ್ ಢಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಹಿನ್ನಲೆಯಲ್ಲಿ ಬೈಕ್ ಸವಾರ ಹಾಗೂ ಆತನ ತಾಯಿಯನ್ನು ಆರೋಪಿಯನ್ನಾಗಿಸಿ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನ.13 ರ ಸಂಜೆ 7 ಗಂಟೆ ವೇಳೆ ಜಾಲ್ಸೂರು ಗ್ರಾಮದ ಅಡ್ಕಾರು ಭಜನಾ ಮಂದಿರದ ಬಳಿ ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಚನಿಯಪ್ಪ ನಾಯ್ಕ(67) ಎಂಬವವರಿಗೆ KA 21 Y 6295 ನೇ ನೊಂದಣಿ ಸಂಖ್ಯೆಯ ಬೈಕ್ ಢಿಕ್ಕಿಯಾಗಿತ್ತು. ಪರಿಣಾಮ ಚನಿಯಪ್ಪ ನಾಯ್ಕ ಗಂಭೀರವಾಗಿ ಗಾಯಗೊಂಡು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ನ.೧೪ ರಂದು ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಬೈಕ್ ಸವಾರ ದೀಕ್ಷಿತ್ ಬಳಿ ಚಾಲನಾ ಪರವಾನಿಗೆ ಇಲ್ಲದೇ ಇದ್ದುದ್ದರಿಂದ ಈತನಿಗೆ ವಾಹನ ಸವಾರಿ ಮಾಡಲು ಕೊಟ್ಟ ವಾಹನ ನೋಂದಣಿ ಮಾಲೀಕರಾದ ಆತನ ತಾಯಿ ಸುನಿತಾ ಎಂಬವರನ್ನೂ ಆರೋಪಿಯನ್ನಾಗಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.