ಉಡುಪಿ, ನ 16 (Daijiworld News/MSP): ರಾಮನವಮಿ ದಿನವೇ ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಲಿ. ಹಿಂದೂ ಪರಂಪರೆಯ ಪ್ರತಿನಿಧಿಯಾಗಿ ಈ ಕೆಲಸ ನಡೆಸಿಕೊಡೆಸಿ ಎಂದು ಯೋಗ ಗುರು ಬಾಬಾ ರಾಮದೇವ್ ಹಕ್ಕೊತ್ತಾಯ ಮುಂದಿಟ್ಟಿದ್ದಾರೆ.
ಅವರು ಉಡುಪಿಗೆ ಭೇಟಿ ನೀಡಿದ್ದ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿ, ಈ ಅಭಿಪ್ರಾಯ ಮುಂದಿಟ್ಟರು. ಅಯೋಧ್ಯೆ ಜ್ಞಾನತೀರ್ಥವಾಗಲಿ, ವಿದ್ಯಾಪರಂಪರೆಯ ಪ್ರತೀಕವಾಗಲಿ. ಸರ್ಕಾರವೇ ಪ್ರತ್ಯಕ್ಷವಾಗಿ ರಾಮಮಂದಿರ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಹೀಗಾಗಿ ಪ್ರಧಾನಿ ಶಿಲಾನ್ಯಾಸ ಮಾಡಲಿ ಎನ್ನುವುದು ನಮ್ಮ ಆಸೆ ಎಂದರು.
ಮುಂದುವರಿಸಿ ಮಾತನಾಡಿದ ಅವರು, "ಮಂದಿರದ 67 ಎಕರೆ ಭೂ ವ್ಯಾಪ್ತಿ ಹೊರತುಪಡಿಸಿ ಹೊರಗೆ ಎಲ್ಲೇ ಆದರೂ ಭವ್ಯ ಮಸೀದಿ ನಿರ್ಮಾಣವಾಗಲಿ ಎಂದರು.
ಕ್ರೈಸ್ತರಿಗೆ ವ್ಯಾಟಿಕನ್, ಮುಸ್ಲಿಂರಿಗೆ ಮೆಕ್ಕಾ ಮದೀನ, ಸಿಖ್ಖರಿಗೆ ಸ್ವರ್ಣ ಮಂದಿರ ರೀತಿ ಹಿಂದುಗಳ ಭಕ್ತಿ ನಂಬಿಕೆಯಂತೆ ಅಯೋಧ್ಯೆಯಲ್ಲಿ ರಾಮಮಂದಿರ ರೂಪುಗೊಳ್ಳಬೇಕು. ಅಯೋಧ್ಯೆ ಜ್ಞಾನತೀರ್ಥವಾಗಲಿ, ವಿದ್ಯಾಪರಂಪರೆಯ ಪ್ರತೀಕವಾಗಲಿ ಎಂದು ಆಶಿಸಿದರು.
ನಮ್ಮ ದೇಶದಲ್ಲಿ ಹಿಂದೂ-ಮುಸ್ಲಿಂರ ಡಿಎನ್ಎ ಒಂದೇ. ವಿಷ ತುಂಬಿದ ಓವೈಸಿ ಮಾತಿಗೆ ಬೆಲೆ ಕೊಡಲ್ಲ. ಸಮಾನತೆ ಹೊರತು ವಿಘಟನೆ ಸಲ್ಲದು ಎಂದು ಹೇಳಿದರು.