ಮಂಗಳೂರು, ಅ.16 (DaijiworldNews/AK): ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗವು ಕಳೆದ 4 ವರ್ಷಗಳಿಂದ ದಸರಾ ಹಬ್ಬದ ಪ್ರಯುಕ್ತ ಮಂಗಳೂರಿನಿಂದ ಹಾಗೂ ಉಡುಪಿಯಿಂದ ವಿವಿಧ ದೇವಸ್ಥಾನ / ಪ್ರೇಕ್ಷಣಿಯ ಸ್ಥಳಗಳಿಗೆ ವಿಶೇಷ ಪ್ರವಾಸ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಹಮ್ಮಿಕೊಂಡಿದೆ.

ಪ್ಯಾಕೇಜ್ ಪ್ರವಾಸಕ್ಕೆ ಸಾರ್ವಜನಿಕ ಪ್ರಯಾಣಿಕರಿಂದ ಉತ್ತಮ ರೀತಿಯ ಪ್ರತಿಕ್ರಿಯೆ / ಸ್ಪಂದನೆ ಬಂದಿರುತ್ತದೆ. ಅದರಂತೆ ಈ ವರ್ಷವೂ ಸಹ ಅಕ್ಟೋಬರ್ 20 ರವರೆಗೆ ವಿಭಾಗದ ಘಟಕಗಳಿಂದ ಸ್ಥಳೀಯ ಪ್ರೇಕ್ಷಣಿಯ ಸ್ಥಳಗಳಿಗೆ/ ದೇವಸ್ಥಾನಗಳಿಗೆ ದಸರಾ ವಿಶೇಷವಾಗಿ ಪ್ಯಾಕೇಜ್ ಪ್ರವಾಸವನ್ನು ಯಶಸ್ವಿಯಾಗಿ ಕಾರ್ಯಾಚರಿಸುತ್ತಿದ್ದು, ಬಹುಜನರ ಬೇಡಿಕೆಯ ಮೇರೆಗೆ ಮಂಗಳೂರು ದಸರಾ ಪ್ಯಾಕೇಜ್ ಪ್ರವಾಸವನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಅಕ್ಟೋಬರ್ 25 ರವರೆಗೆ ವಿಸ್ತರಿಸಲಾಗಿದೆ.
ಪ್ಯಾಕೇಜ್ ಹೆಸರು, ಪ್ರಯಾಣದ ದರ ವಿವರ (ಊಟ ಉಪಹಾರ ಹೊರತುಪಡಿಸಿ)
ಮಂಗಳೂರು ದಸರಾ ದರ್ಶನ ವಯಸ್ಕರಿಗೆ 500ರೂ., ಮಕ್ಕಳಿಗೆ 400 ರೂ.,
ಮಂಗಳೂರು-ಕೊಲ್ಲೂರು- ವಯಸ್ಕರಿಗೆ 600ರೂ., ಮಕ್ಕಳಿಗೆ 500 ರೂ.,
ಮಂಗಳೂರು-ತಲಕಾವೇರಿ-ಭಾಗಮಂಡಲ- ವಯಸ್ಕರಿಗೆ 600ರೂ., ಮಕ್ಕಳಿಗೆ 500 ರೂ.,
ಮಂಗಳೂರು-ಸಿಗಂದೂರು-ವಯಸ್ಕರಿಗೆ 700ರೂ., ಮಕ್ಕಳಿಗೆ 600 ರೂ.,
ಮಂಗಳೂರು-ಶೃಂಗೇರಿ- ವಯಸ್ಕರಿಗೆ 600ರೂ., ಮಕ್ಕಳಿಗೆ 500 ರೂ.,
ಉಡುಪಿ-ಕೊಲ್ಲೂರು- ವಯಸ್ಕರಿಗೆ 500ರೂ., ಮಕ್ಕಳಿಗೆ 400 ರೂ.,
ಉಡುಪಿ-ಶೃಂಗೇರಿ- ವಯಸ್ಕರಿಗೆ 500ರೂ., ಮಕ್ಕಳಿಗೆ 400 ರೂ.
ಬಸ್ಗಳಿಗೆ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಇರುತ್ತದೆ ಎಂದು ಕೆ.ಎಸ್.ಆರ್.ಟಿ.ಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.