ಮೂಡುಬಿದಿರೆ, ನ 20 (Daijiworld News/MSP): ದೇವಸ್ಥಾನದಲ್ಲಿ ಮಹಿಳೆಯೊಬ್ಬರ ಬ್ಯಾಗ್ ಕಳ್ಳತನ ಮಾಡಿದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬುಧವಾರ ಬಂಧಿಸಿದ್ದು ಆತನಿಂದ ಸುಮಾರು 37 ಸಾವಿರ ಮೌಲ್ಯದ ನಾಲ್ಕು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿ ದರೆಗುಡ್ಡೆಯ ಉಮೇಶ್ ಪೂಜಾರಿ (38)ಎಂದು ತಿಳಿದುಬಂದಿದೆ. ಆರೋಪಿ ಕೆಲಸವಿಲ್ಲದೆ ಉಂಡಾಡಿ ಗುಂಡನಂತೆ ತಿರುಗಾಡುತ್ತಿದ್ದ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಪೇಟೆಯ ಹನುಮಂತ ದೇವಸ್ಥಾನಕ್ಕೆ ಬಂದಿದ್ದ ಕೋಟೆಬಾಗಿಲಿನ ಮಹಿಳೆಯೊಬ್ಬರು ತನ್ನಲ್ಲಿದ್ದ ಬ್ಯಾಗನ್ನು ಒಂದು ಕಡೆ ಇಟ್ಟು ದೇವರ ದರ್ಶನ ಮಾಡುತ್ತಿದ್ದರು. ಇದನ್ನು ಗಮನಿಸಿದ ಆರೋಪಿ ತನ್ನಲ್ಲಿದ್ದ ಬ್ಯಾಗ್ನೊಳಗೆ ಮಹಿಳೆಯ ಬ್ಯಾಗನ್ನು ಹಾಕಿ ಹೊರನಡೆದಿದ್ದ. ಮಹಿಳೆ ದೇವರ ದರ್ಶನ ಪಡೆದು ಬಂದಾಗ ಬ್ಯಾಗ್ ಕಳ್ಳತನವಾದದ್ದು ಗಮನಕ್ಕೆ ಬಂತು. ಬ್ಯಾಗ್ನಲ್ಲಿ ನಗದು ಮತ್ತು ಎರಡು ಮೊಬೈಲ್ಗಳಿದ್ದವು. ಕಳ್ಳತನದ ಬಗ್ಗೆ ಮಹಿಳೆ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದರು.
ಪೊಲೀಸ್ ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ನೇತೃತ್ವದ ತಂಡ ತನಿಖೆ ಕೈಗೆತ್ತಿಗೊಂಡು, ದೇವಸ್ಥಾನದ ಒಳಗಡೆ ಇದ್ದ ಸಿಸಿ ಕೆಮರಾದ ಫೂಟೇಜ್ಗಳನ್ನು ಪರಿಶೀಲಿಸಿದಾಗ ಅದರಲ್ಲಿ ಕಳ್ಳತನದ ದೃಶ್ಯಗಳು ದಾಖಲಾಗಿತ್ತು. ಆರೋಪಿಯ ಗುರುತು ಹಚ್ಚಿದ ಪೊಲೀಸರು ಬುಧವಾರ ಅರಮನೆ ಬಾಗಿಲು ಬಳಿ ಆತನನ್ನು ಬಂಧಿಸಿ ನಾಲ್ಕು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಬ್ಯಾಗ್ನಲ್ಲಿದ್ದ ಹಣವನ್ನು ಖರ್ಚು ಮಾಡಿರುವುದಾಗಿ ಪೊಲೀಸರಲ್ಲಿ ಹೇಳಿದ್ದಾನೆನ್ನಲಾಗಿದೆ. ಎರಡು ಮೊಬೈಲ್ಗಳು ಕೋಟೆಬಾಗಿಲಿನ ಮಹಿಳೆಗೆ ಸಂಬಂಧಿಸಿದ್ದಾಗಿದ್ದು ಇನ್ನೆರಡು ಮೊಬೈಲ್ಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಕೋರ್ಟ್ಗೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.