ಮಂಗಳೂರು, ನ 20 (DaijiworldNews/SM): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್ ಎಫ್ ಸಿಬ್ಬಂದಿಗಳಿಗೆ ಯೋಗ ಕುರಿತಂತೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಏರ್ ಪೋರ್ಟ್ ನ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮವನ್ನು ಯೋಗ ಗುರು ಬಾಬಾ ರಾಮ್ ದೇವ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಐಎಸ್ ಎಫ್ ಸಿಬ್ಬಂದಿಗಳ ದೈಹಿಕ ಸಾಮಾರ್ಥ್ಯದ ಮಹತ್ವದ ಬಗ್ಗೆ ವಿವರಿಸಿದರು. ಯಾವರೀತಿಯಲ್ಲಿ ದೈಹಿಕ ಸಾಮಾರ್ಥ್ಯವನ್ನು ಬೆಳೆಸಿಕೊಳ್ಳಬೇಕೆನ್ನುವುದನ್ನು ವಿವರಿಸಿದರು. ಇದೇ ಸಂದರ್ಭ ಎಎಸ್ಜಿ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು. ಕರ್ತವ್ಯದ ಸಮಯದಲ್ಲಿ ಪ್ರತಿಕ್ರಿಯೆಗಳು ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು.
ಕಳೆದ ಕೆಲವು ದಿನಗಳಿಂದ ಬಾಬಾ ರಾಮ್ ದೇವ್ ಅವರು ಉಡುಪಿಯಲ್ಲಿನ ಯೋಗ ಕುರಿತ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದರು. ಬುಧವಾರದಂದು ಅವರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ನಿರ್ಗಮಿಸಿದ್ದಾರೆ.