ಉಡುಪಿ, ಜ 13: ಬ್ರಹ್ಮಾವರದ ನವೀಕರಿಸಲಾದ ಸೇಂಟ್ ಮೇರಿ ಸಿರಿಯನ್ ಆರ್ಥೊಡಾಕ್ಸ್ ಕ್ಯಾಥೆಡ್ರಲ್ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಾಯಿತು.
ಸೇಂಟ್ ಮೇರಿ ಸಿರಿಯನ್ ಆರ್ಥೊಡಾಕ್ಸ್ ಕ್ಯಾಥೆಡ್ರಲ್ ಕಟ್ಟಡವನ್ನು ಮಲಂಕರ ಆರ್ಥೋಡಾಕ್ಸ್ ಸಿರಿಯನ್ ಸಭೆಯ ಪರಮಾಧ್ಯಕ್ಷ ಕೆಥೋಲಿಕೊಸ್ ಬಸೆಲಿಯೋಸ್ ಮಾರ್ತೋಮಾ ಪೌಲೋಸ್ ದ್ವೀತಿಯ ಅವರು ಉದ್ಘಾಟಿಸಿ ಆಶೀರ್ವಚಿಸಿ, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭ ಮಲಂಕರ ಆರ್ಥೋಡಾಕ್ಸ್ ಸಿರಿಯನ್ ಸಭೆಯ ಮುಂಬಯಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಹಿಸ್ ಗ್ರೇಸ್ ಗೀವರ್ಗೀಸ್ ಮಾರ್ ಕುರಿಲೋಸ್, ಕೋಲ್ಕತ್ತಾ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ಜೋಸೆಫ್ ಮಾರ್ ಡೈನಿಶಿಯಸ್, ಅಹ್ಮದಾಬಾದ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಗೀವರ್ಗೀಸ್ ಮಾರ್ ಯೊಲಿಯೋಸ್, ಬೆಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ ಅಬ್ರಹಾಂ ಮಾರ್ ಸೆರಾಫಿಮ್, ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಹಿಸ್ ಗ್ರೇಸ್ ಯಾಕೊಬ್ ಮಾರ್ ಎಲಿಯಾಸ್, ಎಸ್ ಎಮ್ ಎಸ್ ಕೆಥೆಡ್ರಲ್ನ ವಿಕಾರ್, ಜನರಲ್ ವಂ. ಸಿ ಎ ಐಸಾಕ್, ಸಹಾಯಕ ಧರ್ಮಗುರುಗಳಾದ ಲಾರೆನ್ಸ್ ಡಿ'ಸೋಜಾ, ಡೇವಿಡ್ ಕ್ರಾಸ್ತಾ, ಅಬ್ರಾಹಂ ಕುರಿಯೋಕೋಸ್, ನೊವೆಲ್ ಲೂವೆಸ್, ಜೋಸೆಫ್ ಚಾಕೋ, ಟ್ರಸ್ಟಿ ಅನಿಲ್ ಬಿ ರೋಡ್ರಿಗಸ್, ಕಟ್ಟಡ ಸಮಿತಿಯ ಸಂಚಾಲಕ ಅಲೆನ್ ರೋಹನ್ ವಾಜ್ ಮೊದಲಾದವರು ಉಪಸ್ಥಿತರಿದ್ದರು.
ದೇವಾಲಯದ ಉದ್ಘಾಟನಾ ಸಮಾರಂಭದ ಪೂರ್ವ ಭಾವಿಯಾಗಿ ಹೊರೆ ಕಾಣಿಕೆ ಮೆರವಣಿಗೆಯು ಬ್ರಹ್ಮಾವರದ ಆಕಾಶವಾಣಿಯಿಂದ - ಬ್ರಹ್ಮಾವರದ ಬಸ್ ಸ್ಟ್ಯಾಂಡ್ ಮೂಲಕ ಹಾದು ಎಸ್ ಎಮ್ ಎಸ್ ಚರ್ಚ್ ವರೆಗೆ ತಲುಪಿತು. ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಹಿಸ್ ಗ್ರೇಸ್ ಯಾಕೊಬ್ ಮಾರ್ ಈ ಅಪೂರ್ವವಾದ ಮೆರವಣಿಗೆಗೆ ಚಾಲನೆ ನೀಡಿದರು. ಅಲಂಕೃತ ವಾಹನಗಳಲ್ಲಿ ಫಲಪುಷ್ಪಾಧಿ, ತಾಂಬೂಲ, ಹಾಗೂ ಜನರು ದೇಣಿಗೆ ನೀಡಿರುವ ತರಕಾರಿ, ಧಾನ್ಯಗಳನ್ನು ವೇದಘೋಷ, ಚಂಡೆ, ಸಂಗೀತ, ಹುಲಿ ವೇಷ ಹಾಗೂ ಸಾಂಸ್ಕøತಿಕ ಜಾನಪದ ಗುಂಪುನೊಂದಿಗೆ ಭಕ್ತರು ಸಾಗಿದರು.