ಉಡುಪಿ, ನ 21 (DaijiworldNews/SM): ಉಡುಪಿ ಜಿಲ್ಲೆಯಲ್ಲಿನ ಎಲ್ಲಾ ಬೀಚ್ಗಳಿಗೂ ಬ್ಲೂ ಫ್ಲಾಗ್ ಮಾನ್ಯತೆ ದೊರೆಯುವ ರೀತಿಯಲ್ಲಿ ಬೀಚ್ಗಳನ್ನು ಅಭಿವೃದ್ಧಿ ಪಡಿಸಿ, ಪ್ರವಾಸೋದ್ಯಮವನ್ನು ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳು ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದ್ದಾರೆ.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ಜಿಲ್ಲೆಯಲ್ಲಿ ಬ್ಲೂ ಫ್ಲಾಗ್ ಪಡೆದಿರುವ ಬೀಚ್ಗಳಲ್ಲಿನ ಸೌಲಭ್ಯಗಳನ್ನು ಗುರುತಿಸಿ, ಇತರೆ ಬೀಚ್ಗಳಲ್ಲಿ ಸಹ ಆ ಸೌಲಭ್ಯಗಳನ್ನು ಅಳವಡಿಸಿ, ಜಿಲ್ಲೆಯ ಎಲ್ಲಾ ಬೀಚ್ಗಳೂ ಹಂತ ಹಂತವಾಗಿ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯೋನ್ಮು ಕರಾಗುವಂತೆ ಸೂಚಿಸಿದ ಡಿಸಿ, ಬ್ಲೂ ಫ್ಲಾಗ್ ಪಡೆದಿರುವ ಬೀಚ್ನಲ್ಲಿರುವ ಸೌಲಭ್ಯಗಳು ಮತ್ತು ಪಡೆಯದೆ ಇರುವ ಬೀಚ್ಗಳಲ್ಲಿರುವ ಬ್ಲೂ ಫ್ಲ್ಯಾಗ್ ಸರ್ಟಿಫಿಕೇಶನ್ ಗೈಡ್ಲೈನ್ಸ್ಗಳಲ್ಲಿನ ಕೊರತೆಗಳ ಕುರಿತು ಕಾಲೇಜು ವಿದ್ಯಾರ್ಥಿಗಳ ಮೂಲಕ ಸರ್ವೆ ನೆಡೆಸುವಂತೆ ಡಿಸಿ ಜಿ.ಜಗದೀಶ್ ಸೂಚಿಸಿದರು.